ಓದೋ ಕನ್ನಡಿಗರಿನ್ಯಾರು......
ಕವನ
ಕವನ ಕವಿತೆಗಳು ನೂರಾರು
ಓದೋ ಕನ್ನಡಿಗರಿನ್ಯಾರು......
ಮನೆಗೊಬ್ಬ ಕವಿ,
ಮನಕೊಂದು ಕವಿತೆ,
ದಿನ ದಿನವು ನೂರಾರು
ಓದೋ ಕನ್ನಡಿಗರಿನ್ಯಾರು......
ಬರೆದಿಟ್ಟ ಕೃತಿಗಳು ಸಾವಿರಾರು,
ಮುಟ್ಟದೆ ಇಟ್ಟವು ನೂರಾರು,
ಓದೋ ಕನ್ನಡಿಗರಿನ್ಯಾರು......
ಕವಿಗಳ ಸಂಖೆ ಮಿತಿಯನು ಮೀರಲಿ,
ಅವರ ಕಲ್ಪನೆ ಮುಗಿಲ ಮೀರುವಂತೆ,
ಹಾರೈಸುವ ಇವರನು ಮಹಾಕವಿಗಳಾಗುವಂತೆ..
ಮಹಾಕವಿಗಳಾಗುವಂತೆ........
Comments
ಉ: ಓದೋ ಕನ್ನಡಿಗರಿನ್ಯಾರು......