ಓಪನ್ ಆಫೀಸ್ ಸರ್ವರ್ ಡೌನ್ ?

ಓಪನ್ ಆಫೀಸ್ ಸರ್ವರ್ ಡೌನ್ ?

ಬರಹ

 

Open Office 3.0 ಡೌನ್‌ಲೋಡ್ ಮಾಡೋಣ ಅಂತ http://www.openoffice.org/ ಗೆ ಹೋದರೆ, ನನಗೆ ಆ ಪುಟವನ್ನು ಬಳಸಲು ನನಗೆ ಅನುಮತಿಯಿಲ್ಲ (403 Forbidden) ಎಂದು ಹೇಳಿತು. ಏನಾಯ್ತಪ್ಪಾ ಎಂದು ಗೂಗಲ್ ಗುರುವನ್ನು ಕೇಳಿದಾಗ ಈ ಕೊಂಡಿ ಸಿಕ್ಕಿತು. ಈ ತಾಣದಲ್ಲಿದ್ದ ಸಂದೇಶವನ್ನು ನೋಡಿ ಬಹಳ ಸಂತೋಷವಾಯಿತು.

---------------------

Apologies - our website is struggling to cope with the unprecedented
demand for the new release 3.0 of OpenOffice.org. The technical teams
are
trying to come up with a solution.

Thank you for your patience.

---------------------

ಹಿಂದೆಂದೂ ಕೇಳರಿಯದ ಸಂಖ್ಯೆಯಲ್ಲಿ ಜನರು ಒಮ್ಮೆಲೇ ಓಪನ್ ಆಫೀಸ್‌ಅನ್ನು ಡೌನ್‌ಲೋಡ್ ಮಾಡುತ್ತಿರುವುದರಿಂದ ಈ ರೀತಿ ಟ್ರಾಫಿಕ್‌ಅನ್ನು ನೇರವಾಗಿ ಡೌನ್‌ಲೋಡ್ ಪುಟಕ್ಕೇ ಕರೆದೊಯ್ಯುತ್ತಿದ್ದಾರೆ.

ನಾನು ಆಗಲೇ ಡೌನ್‌ಲೋಡ್ ಮಾಡಿ ಆಯ್ತು. ನೀವು ಕೂಡಾ ಇಲ್ಲಿಂದ ಓಪನ್ ಆಫೀಸ್ ಪಡೆಯಿರಿ.