ಓಲಂಪಿಕ್ ಗೀತೆ

ಓಲಂಪಿಕ್ ಗೀತೆ

ಬರಹ

ಓಲಂಪಿಕ್ ಗೀತೆ.
(ಅಂತಾರಾಷ್ಟ್ತೀಯ ಓಲಂಪಿಕ್ ಸಮಿತಿಯು 1957 ರಲ್ಲಿ ಓಲಂಪಿಕ್ ಗೀತೆಯನ್ನು ಅಧಿಕೃತವಾಗಿ ಅಂಗೀಕರಿಸಿತು.
ಗೀತೆಗೆ ಆಧಾರ ಕೋಸ್ಟಿಸ್ ಪಾಲಮಸ್ ರ ಒಂದು ಹಾಡು. ಇದಕ್ಕೆ ಸ್ಟಿರೋ ಸಮಾರ 1896 ರಲ್ಲೇ ರಾಗ ಸಂಯೋಜನೆ ಮಾಡಿದ್ದರು.)
ಅನುವಾದ : ಆರ್. ಪೂರ್ಣಿಮಾ.
( ವಿಶೇಷ ಸೂಚನೆ.: ವಿಶ್ವದೆಲ್ಲೆಡೆ ಓಲಂಪಿಕ್ ಕ್ರೀಡೋತ್ಸವ ಸಂಭ್ರಮ ದಿಂದ ನೋಡುತ್ತಿರುವ ಈ ಸಮಯ ನನ್ನ ಹಳೆಯ ಸಂಗ್ರಹದಿಂದ
ಯಾವುದೋ ಪತ್ರಿಕೆಯಲ್ಲಿ ಪ್ರಕಟವಾದ ಈ ಓಲಂಪಿಕ್ ಗೀತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ಇದರ ಅನುವಾದಕರು
ಹಾಗೂ ಕತೃವನ್ನು ಕೃತಜ್ನತೆಯಿಂದ ನೆನಪಿಸಿಕೊಳ್ಳುತ್ತ. )

ಅನಾದಿ ಅಮರ ಚೇತನ.
ಸತ್ಯ, ಸುಂದರ ಮತ್ತು ಒಳಿತಿನ ತಂದೆಯೇ
ಇಳಿದು ಬಾ ಮುಖ ತೋರು.
ನಿನ್ನ ಅಕ್ಷಯ ಕೀರ್ತಿಯ ಮೊದಲು ಕಂಡ
ಆ ಬಾನಿನಡಿಯ ಈ ಅಂಗಣದಲ್ಲಿ
ನಮ್ಮ ಮೇಲೆ ಚೆಲ್ಲು ನಿನ್ನ ಬೆಳಕನು.

ಈ ಉದಾತ್ತ ಕ್ರೀಡೆಗಳಿಗೆ ಜೀವ ಕೊಡು
ಉತ್ಸಾಹ ತುಂಬು!
ಸ್ಪರ್ಧೆಯಲಿ ಹೋರಾಟದಲಿ ವಿಜೇತರಿಗೆ
ಬಾಡದ ಹೂ ಗೊಂಚಲುಗಳ ಅನುಗ್ರಹಿಸು!
ನಿರ್ಮಿಸು ಉಕ್ಕಿನ ಹೃದಯಗಳ
ನಮ್ಮೆದೆಗೂಡುಗಳಲಿ!

ಈ ಬಯಲು,ಗಿರಿಶಿಖರ, ಸಾಗರಗಳು
ಗುಲಾಬಿ ಬಣ್ಣತಳೆದು ಬೆಳಗುತ್ತವೆ ನಿನ್ನ ಬೆಳಕಲಿ.
ಎಲ್ಲ ದೇಶಗಳು ಸೇರಿ ನಿನ್ನ ಸ್ತುತಿಸಲು
ಇದೇ ವಿಶಾಲ ದೇಗುಲ
ಓ ಅನಾದಿ ಅಮರ ಚೇತನ