ಓ ಗುಲಾಬಿ...

ಓ ಗುಲಾಬಿ...

ಕವನ

ಅರಳು ಗುಲಾಬಿ

ನಿನ್ನ ನಗುವಿನ ಹಿಂದೆ

ನಾನರಿಯದ ಸಂಗೀತವಿದೆ

ಗೀತ ನಿನಾದವಾಗಿದೆ.

 

ಆ ಕೆಂಪು ಕಂಪಾಗಿ

ಕಂಗಳನು ಕಾಡಿದೆ

ಸುತ್ತ ಸುಳಿವ ದುಂಬಿಗಳಲಿ

ನನ್ನ ಭಾವ ಸಂದೇಶವಿದೆ.

 

ಚುಚ್ಚದಿರು ಮುಂಗೋಪದಿ

ಪ್ರೇಮವೇ ಚಿಕಿತ್ಸೆ

ನಾ ಬರಿಯ ಆರಾಧಕ

ಬೇಸರಿಸದಿರು ನೋಟಕೆ.

 

ಕುಂಡದ ಕುಬ್ಜ ಜಗದಿ

ನಿನ್ನ ಚುಂಬಕ ಶಕ್ತಿ

ಅಗಾಧ ಅದ್ಭುತ

ಕಾಣದವ ಹೃದಯಶೂನ್ಯ!!

-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್