ಓ ಚಂದಿರ…
ಕವನ
ಓ ಚಂದಿರ ಯುಗಾದಿ ವಸಂತ ಚಂದಿರ
ಆಕಾಶದಲಿ ನೀ ಎಷ್ಟೊಂದು ಸುಂದರ
ನಿನ್ನ ನೋಡುವ ಮನುಜರು ಚಿನ್ಮಯರು
ನಿನ್ನ ದರ್ಶನ ಭಗವತ್ಚಿಂತನ ಪಾವನ ||೧||
ನಿಸರ್ಗ ಆಕಾಶದ ಏನು ಚಿತ್ತಾರ
ನಿನ್ನಾ ಹುಟ್ಟು ಏನು ವಿಸ್ಮಯವು
ಏನು ಸುಂದರವು ನಿನ್ನಾ ಗುಟ್ಟು
ನಿಸರ್ಗವೇ ಉತ್ತರಿಸಬೇಕು ನಿನ್ನೆಲ್ಲಾ ಚಮತ್ಕಾರ ||೨||
ಗಣೇಶ ಚೌತಿಯಲ್ಲಿ ನಿನ್ನ ನೋಡಲೊಲ್ಲರು
ಇಳೆಯ ಜನರು; ಎಂಥ: ಕೌತುಕ !
ಯುಗಾದಿಯಲಿ ಪರವಶ ಭಕ್ತಿಯಲಿ ನೋಡುವರು
ಇಳೆಯ ಜನರು; ಎಂಥ: ಕೌತುಕ ! ||೩||
ಓ ಚಂದಿರ ನೀ ವಿಸ್ಮಯ ಕವಿಹೃದಯ ಕವನಗಾರ
ಜಗಕೆ ನೀನು ಮಾತ್ರ ಸುರಸುಂದರಗಾರ
ಸಕಲ ಜೀವಾತ್ಮಕೂ ನೀ ಆನಂದ ಸಾಗರ
ಜಗಬೆಳಗುವ ಸೂರ್ಯ ಸಂಗಮದಲಿ ನೀ ಅಮರ ||೪||
- ಜಂಬರಘಟ್ಟ ಟಿ ಮಂಜಪ್ಪ, ಶಿವಮೊಗ್ಗ
ಚಿತ್ರ್
