ಓ ಚೈತನ್ಯ...
ಕವನ
ಶ್ರದ್ಧೆ ಭಕ್ತಿ ಭಾವದಲಿ ಕೈ ಮುಗಿವೆ ಓ ಚೈತನ್ಯ
ಈ ಲೋಕದಲಿ ನಿನ್ನ ವೈಭವವೆನಿತು ಅನನ್ಯ!
ನಿನ್ನನೆನಿತೋ ಕರೆವರು ಹಲವು ಭಾವದಲಿ
ನೀನೋ ರಾಮ ರಹೀಮ ಏಸು ರೂಪದಲೀ
ಯಾರಾದರೂ ಆಗಿರು ನಿನ್ನ ಸಮನಾರಿಹರು
ಅಗಣಿತ ಅಸಾಮಾನ್ಯ ಗುಣಗಳ ಸರದಾರ!
ಸೃಷ್ಟಿಯ ಪರಿಚಲನೆ ಅದೆಂತು ನಡೆಸಿರುವೆ
ಅಪ್ರತಿಮ ಕಲಾ ಪ್ರತಿಭಾ ಚತುರನು ನೀನು
ನಂಬದಿಹ ಹಲವರೂ ಒಮ್ಮೊಮ್ಮೆ ದಿಗ್ಮೂಢ
ಈ ಸಕಲ ಚರಾಚರಗಳ ಒಡೆಯನೂ ನೀನೇ!
ಈ ಪರಿಯ ವಿನ್ಯಾಸವನು ನಾನೆಲ್ಲೂ ಕಾಣೇ
ನಿಗೂಢ ಪ್ರಕೃತಿಯಲಿ ನೀನೇ ಅನಂತ ಚೈತನ್ಯ
ಈ ಸೃಷ್ಟಿಯ ಪರಮ ರಹಸ್ಯ ನಿನ್ನಲೇ ಇರಲೀ
ಮಾನವ ನಿನ್ನಾಣತಿಯಲೇ ನಗುನಗುತಲಿರಲಿ!
-ಕೆ ನಟರಾಜ್, ಬೆಂಗಳೂರು
ಚಿತ್ರ್