ಓ ನನ್ನ ಗೆಳೆಯ

ಓ ನನ್ನ ಗೆಳೆಯ

ಕವನ

ಓ ನನ್ನ ಗೆಳೆಯ ಸ್ವಲ್ಪ ಹತ್ತಿರ ಬಾ 
ಮನಸ್ಸಿನ ಮಾತನ್ನು ಕದ್ದು ಕೇಳು ಬಾ
ಹೃದಯದ ಬಡಿತವನ್ನು ಕೇಳಿಸುವೆ ಬಾ 
ಕನಸು ಕಾಣುವ ಈ ಹುಡುಗಿಗೆ ಸಂಜೆಯ ತಂಗು ತಾ.
ನಿನ್ನ ನೋಟಕ್ಕೆ ಇವಳು ನಾಚಿ ಬಿಡುವಳು 
ಆ ನಗುವಿಗೆ ಕಣ್ಣಿನ ಭಾಷೆ ಕಲಿಸುವಳು 
ಮೌನದಲ್ಲಿಯೇ ನಿನ್ನ ಮನಸ್ಸನು ಸೆರೆ ಹಿಡಿಯುವಳು 
ಓ ನನ್ನ ಗೆಳೆಯ ಸ್ವಲ್ಪ ಹತ್ತಿರ ಬಾ
ನೀನು ಪ್ರೀತಿಸುವೆ ಎಂದು ಹೇಳಿದಾಗ 
ಆ ತುಟಿಗಳ ಮೇಲೆ ನಗುವು ಚಿಮ್ಮುವಳು 
ನಾ ನಿನ್ನ ಪ್ರೀತಿಸುವೆ ಎಂದು ಮೆಲ್ಲನೆ ಹೇಳುವಳು 
ಓ ನನ್ನ ಗೆಳೆಯ ಸ್ವಲ್ಪ ಹತ್ತಿರ ಬಾ
ಇವಳ ಕೈಯನ್ನು ನೀನು ಮುಟ್ಟಿದಾಗ 
ಕಣ್ಣು ಮುಚ್ಚಿ ನಿನ್ನನು ಅಪ್ಪಿಕೊಳ್ಳುವಳು 
ನಿನ್ನ ಮನಸ್ಸಿಗೆ ಅವಳ ಮನಸ್ಸನ್ನು ಪ್ರೀತಿಯಿಂದ ಅರ್ಪಿಸುವಳು 
ಓ ನನ್ನ ಗೆಳೆಯ  ಸ್ವಲ್ಪ ಹತ್ತಿರ ಬಾ 
ನನ್ನ ಮನಸ್ಸಿನ ಮಾತನ್ನು ಮುಚ್ಚಿ ಕೇಳು ಬಾ