ಓ.. ನನ್ನ ನಲ್ಲೆ

ಓ.. ನನ್ನ ನಲ್ಲೆ

ಕವನ

ಓ.. ನನ್ನ ನಲ್ಲೆ, ಮೆಚ್ಚಿದೆ ನಿನ್ನ ಒಂದೇ ನೋಟದಲಿ,
ಸಿಕ್ಕಾಗ ನೀನು, ಏನೋ ಸಂತೋಷ ಮನದಲಿ
ಹೇಳುವಾಸೆ ಮನಸಲಿ ಅಡಗಿರುವ ಮಾತನು ನಿನ್ನಲಿ,
ಹೇಳಿದರೆ ನಿನ್ನ ಉತ್ತರದ ಭಯ ಮನದಲಿ.


ತಾಳಲಾಗದೆ ಹೇಳಿ ಬಿಟ್ಟೆ ಒಂದು ದಿನ ನಿನ್ನಲಿ
ನೀನಂದೆ ಕೇಳಿ ಹೇಳುವೆ ನನ್ನ ತಂದೆಯಲಿ
ಏನೂ ಹೇಳದೆ ನಡೆದೆ ನಾನು ನನ್ನ ದಾರಿಯಲಿ
ಓ.. ನನ್ನ ನಲ್ಲೆ, ಮೆಚ್ಚಿದೆ ನಿನ್ನ ಒಂದೇ ನೋಟದಲಿ.!!