ಓ ಪ್ರೇಮವೇ !
ಕವನ
ಓ ಪ್ರೇಮವೇ , ಓ ಪ್ರೇಮವೇ ನಿನಗೆ ನಮನ
ಈ ಮನದಲಿ, ಈ ಮನದಲಿ ನಿನದೆ ಮನನ
ಹರಿಯುವ ಈ ನದಿಯಲಿ ನಿನ್ನದೆ ದರ್ಪಣ
ತೇಲುವ ಆ ಮೋಡವೆ ನಿನಗೆ ಅರ್ಪಣ
ಆ ಸಾವೇ ಇಲ್ಲದ ಲೋಕದಲಿ
ನಿನ್ನ ಸನಿಹವೇ ಸುಖದ ಔತಣ
ಏನೂ ಅರಿಯದ ನನ್ನ ಬಾಳಿಗೆ
ಆ ಸನಿಹವೇ ಅಂಕಣ
ಮೆಲ್ಲಗೆ ಮೆದು ಮೆಲ್ಲಗೆ ಬರುವ
ಬೆಳದಿಂಗಳು ನಿನ್ನಯ ಮುಖದ ಸಿಂಚನ
ಮಿಂಚವ ಆ ನಕ್ಷತ್ರಗಳು ನಿನ್ನಯ ಚಿತ್ರಣ
ಆ ಕನಸಲಿ ಅರಳುವ ಕಮಲದಲಿ
ನಿನ್ನ ನಗುವೆ ಹೃದಯದ ಭೂಷಣ
ಏನೂ ಅರಿಯದ ಈ ಮನಸಿಗೆ
ನಿನ್ನ ಆ ನಗುವೇ ತಲ್ಲಣ
ನಾ ಬರೆದ ಪ್ರೇಮ ಕಾವ್ಯದಲಿ
ನಿನ್ನ ನಾಮವೇ ಪಲ್ಲವಿ ಚರಣವು
ಆ ಕವಿತೆಯ ಪ್ರತಿ ಸಾಲಿನಲಿ
ನಿನ್ನ ಅಂದದ ಗುಣಗಾನವು
ಈ ಧರೆಯೆಡೆಗೆ ಸುರಿಯುವ ಮುತ್ತಿನ
ಹನಿಯು ನನ್ನ-ನಿನ್ನ ಪ್ರೀತಿಗೆ ತೋರಣ
ಆ ಸಾವೆಯಿಲ್ಲದ ಮನೆಯೆಡೆಗೆ
ಬೆಳೆಸೋಣ ನಮ್ಮ ಪಯಣ
ಓ ಪ್ರೇಮವೇ , ಓ ಪ್ರೇಮವೇ
Comments
ಉ: ಓ ಪ್ರೇಮವೇ !