ಓ ಭಾರತೀ ಸಂಜಾತರು
ಕವನ
ಆ ಚಂದಿರನ ಮುಟ್ಟುವೆವು
ಮಂಗಳನ ತಲುಪುವೆವು
ತಾರೆಯ ಜೊತೆಯಾಡುವೆವು
ನಾವೇ ಭಾರತೀ ಸಂಜಾತರು॥
ಸಾಫ್ಟ್ವೇರ್ ಕಲಿಗಳು ನಾವು
ಎಲ್ಲ ದೇಶದಲಿಹ ಸರದಾರರು
ಈ ಜಗವೆಲ್ಲ ತುಂಬಿರುವೆವು
ನಾವೇ ಭಾರತೀ ಸಂಜಾತರು॥
ಪ್ರೇಮ ಸಂದೇಶ ಸಾರುವೆವು
ಭಾತೃತ್ವದೆಲ್ಲರ ಸೆಳೆಯುವೆವು
ಸ್ನೇಹದ ಹಸ್ತವ ಚಾಚುವೆವು
ನಾವೇ ಭಾರತೀ ಸಂಜಾತರು॥
ಯುದ್ಧವನು ನಿಲಿಸುವೆವು
ಶಾಂತಿಯನು ಸಾರುವೆವು
ನೆಮ್ಮದಿಯನು ಹಂಚುವೆವು
ನಾವೇ ಭಾರತೀ ಸಂಜಾತರು॥
ಧರ್ಮದ ಸಾರ ಬೀರುವೆವು
ಉದ್ಗ್ರಂಥಗಳ ಓದುವೆವು
ಇತಿಹಾಸವ ಅರಿಯುವೆವು
ನಾವೇ ಭಾರತೀ ಸಂಜಾತರು॥
ಬನ್ನಿ ಎಲ್ಲರು ಒಂದಾಗೋಣ
ಸಹೋದರರಂದದಿ ಬಾಳೋಣ
ನಮ್ಮೀ ವಿಶ್ವವ ಸಂರಕ್ಷಿಸೋಣ
ನಾವೇ ಕನ್ನಡದ ಕುಲಮಕ್ಕಳು॥
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್