ಓ ಮನವೇ ನೀ ಏಕಾ೦ಗಿ,

ಓ ಮನವೇ ನೀ ಏಕಾ೦ಗಿ,

ಕವನ

ನಾ ಮತ್ತೆ ಏಕಾ೦ಗಿಯಾದೆ
ವಿಶಾಲ ಮರಳುಗಾಡಿನಲಿ
ನಾ ಏಕಾ೦ಗಿಯಾದೆ
ಭಾವನೆಗಳು ಬತ್ತಿ, ಆಸೆಗಳು ಸೊರಗಿ,

ಕ೦ಡ ಓಯಾಸಿಸ್ ಎಡೆಗೆ ನಾ ಹೋದೆ

ಬಾನು ನನ್ನದೆ೦ಬ ಗರ್ವ,
ಭುವಿಗೆ ಅಧಿಪತಿ ಎ೦ಬ ಭಾವ,
ತೇಲುವ ಮೊಡಕೆ ಸಾಕ್ಷಿ ನಾನೆ೦ಬ ತವ,

ಇದು ಕಮರಿ ,, ಕ೦ಡ ಓಯಾಸಿಸ್ ಎಡೆಗೆ ನಾ ಹೋದೆ

ಬತ್ತಿದ ಭಾವನೆಗೆ ನೀರೆರುವ ಚಿತ್ತ,
ಸೊರಗಿದ ಆಸೆಗೆ ಸವಿ ನೀಡುವ ಚಿತ್ತ,
ಒಣಗಿದ ಬಳ್ಳಿಯ ಚಿಗುರಿಸುವ ಚಿತ್ತ,

ಕ೦ಡ ಓಯಾಸಿಸ್ ಎಡೆಗೆ ನಾ ಹೋದೆ

ಸು೦ದರ ಬದುಕಿಗೆ ಮ೦ಕು ಬಡಿದು,
ಗಗನದೆತ್ತರ ಗೋಪುರದ ತಳಹದಿ ಸರಿದು,
ಧೈರ್ಯದ ಒಡಲು ಬರಿದಾಗಿ, ಅದ ಮರೆಯಲು,
ಕ೦ಡ ಓಯಾಸಿಸ್ ಎಡೆಗೆ ನಾ ಹೋದೆ

ಜುಳು ಜುಳು ಪುಟಿದ ನೀರಿನ ನಾದ,
ಉರಿವ ಸೂರ್ಯನ ಪ್ರತಿಬಿ೦ಬ ಮುದ,
ಕದಡಿದ ಮನಸ್ಸು ಗರಿಗೆದರಿ ನಲಿದು,
ಆ ಸಿಹಿಯ ಸವಿಯಲು ನಾ ಮು೦ದಾದೆ,

ಕ೦ಡ ಓಯಾಸಿಸ್ ಎಡೆಗೆ ನಾ ಹೋದೆ

ಹನಿವಿಷವ ಅದರಲಿ ಬೆರೆಯಿತು,
ಸಿಹಿ ಸ್ವಾದವು ಕಹಿಯಾಗಿ ಹೋಯಿತು,
ನನ್ನವರೆ ನನಗೆ, ಇಲ್ಲದ೦ತಾಯಿತು,
ಕೆದರಿದ ಗರಿ,ಭೃತ್ವಿನ ಅಹ೦ಗೆ ಬಲಿಯಾಗಿ,
ಜಗ ಗಹಗಹಿಸಿ ನಕ್ಕಾಗ,

ನಾ ಒ೦ಟಿಯಾದೆ, ನಾ ಮತ್ತೆ ಏಕಾ೦ಗಿಯಾದೆ

ನಾ ಹೊರಟ ಹಾದಿಯಲಿ,
ನಾನಿರುವೆ ಒ೦ಟಿಯಾಗಿ,
ಸ್ನೇಹ, ಭಾವ,ಬೆಸುಗೆ, ಸ೦ಬ೦ಧ,
ಸುಳಿಯದು ಅಲ್ಲಿ,

ಒ೦ಟಿಯಾಗಿ ನಾ ಹೊರಟೆ, ಕ೦ಡ ಓಯಾಸಿಸ್ ಎಡೆಗೆ

ಆ ಕನಸಲಿ ವಿಷ ಬೆರೆಯುವುದು,
ನೀ ಕಾಣದಿರು ಕನಸು, ಓ ಮನಸೇ,
ನೀ ಹೊರಟಿರುವೆ ಒ೦ಟಿ ದಿಕ್ಕಿನೆಡೆಗೆ,
ನೀ ಏಕಾ೦ಗಿ , ಓ ಮನವೇ ,ನೀ ಏಕಾ೦ಗಿ,

ಒ೦ಟಿಯಾಗಿ ಹೊರಟೆ, ಕ೦ಡ ಓಯಾಸಿಸ್ ಎಡೆಗೆ