ಓ ಮನಸೇ ಏಳು ಎದ್ದೇಳು
ಕವನ
ಓ ಮನಸೇ ಏಳು ಎದ್ದೇಳು
ನಿದ್ದಿಯ ಗುಂಗಿನಿಂದ ಎದ್ದೇಳು
ಮೇಲು ಕೀಳೆಂಬ ಜಾತಿಯ ಬೇದದಿಂದ ಎದ್ದೇಳು
ಶ್ರೀಮಂತ ಬಡವನೆಂಬ ಕಿಳರಮೆಯಿಂದ ಎದ್ದೇಳು
ಏಳು ಎದ್ದೇಳು ಜಗತ್ತಿನ ಸೌಂದರ್ಯದ ಸವಿಯನ್ನು ಸವಿಯೇಳು!
ಓ ಮನಸೇ ಏಳು ಎದ್ದೇಳು
ನಾನು ನೀನೆಂಬ ಬಾವದಿಂದ ಎದ್ದೇಳು
ಪ್ರೀತಿ ಪ್ರೇಮದ ಮೋಹದಿಂದ ಎದ್ದೇಳು
ಏಳು ಎದ್ದೇಳು ಪ್ರಕೃತಿಯ ಸೊಬಗನ್ನು ಸವಿಯೇಳು!
ಓ ಮನಸೇ ಏಳು ಎದ್ದೇಳು
ಜ್ಞಾನ ಅಜ್ಞಾನದ ಮೇಲಾಟದಿಂದ ಎದ್ದೇಳು
ವಿಜ್ಞಾನ ತಂತ್ರಜ್ಞಾನದ ಹಿರಿಮೆಯಿಂದ ಎದ್ದೇಳು
ಏಳು ಎದ್ದೇಳು ಅರಳುವ ಹೂವಿನ ಅಂದವನ್ನು ಸವಿಯೇಳು!
ಓ ಮನಸೇ ಏಳು ಎದ್ದೇಳು
ಪ್ರಾಣಿ ಪಕ್ಷಿಗಳ ಕೂಗನ್ನ ಕೆಳೆಳು
ಹಸಿರನ್ನು ಊಳಿಸಿ ನಾಡನ್ನು ಬೆಳಸುವ ಪಣ ತೋಡಲು ಮೇಲೇಳು
ಓ ಮನಸೇ ಏಳು ಎದ್ದೇಳು
ನಿದ್ದಿಯ ಗುಂಗಿನಿಂದ ಎದ್ದೇಳು!