ಓ ಮನಸ್ಸೆ ನೀ ಏಕೆ ಇಷ್ಟು ಕಲ್ಲಾಗುವೆ ?....................

ಓ ಮನಸ್ಸೆ ನೀ ಏಕೆ ಇಷ್ಟು ಕಲ್ಲಾಗುವೆ ?....................

ಬರಹ

ನಾವು ಮನುಷ್ಯರಾಗಿ ಹುಟ್ಟಿದ್ದಿವಿ , ಹುಟ್ಟಿದ್ದಕ್ಕಾಗಿ ನಮ್ಮ ಮನಸ್ಸನ್ನ ಕಲ್ಲು ಮಾಡಿಕೊಳ್ಳಬೇಕಾ ? ಹೌದು ಕೆಲವೊಂದು ಸಾರಿ ಮನಸ್ಸನ್ನ ಕಲ್ಲು ಮಾಡಿಕೊಳ್ಳಬೇಕಾಗುತ್ತೆ ಅದು ಯಾವಾಗ ಅವನಿಗೆ ಕಷ್ಟ ಬಂದಾಗ ಅಥವಾ ಮನಸ್ಸು ದುಃಖದಿಂದ ಖಿನ್ನತೆಗೊಂಡಾಗ ಅವ್ನ ಮನಸ್ಸನ್ನ ಕಲ್ಲು ಮಾಡಿಕೊಳ್ಳುವುದರಲ್ಲಿ ಸಪಲತೆಯಿದೆ ಆದರೆ ಯಾರಾದರೂ ಕಷ್ಟದಲ್ಲಿಯಾಗಲಿ ಅಥವಾ ಯಾವುದೋ ತೊಂದರೆಯಲ್ಲಿದ್ದಾಗ ಮನಸ್ಸನ್ನ ಕಲ್ಲು ಮಾಡಿಕೊಳ್ಳುವುದರಲ್ಲಿ ಏನರ್ಥವಿದೆ.
ಓ ಮನಸ್ಸೆ ನೀ ಏಕೆ ಇಷ್ಟು ಕಲ್ಲಾಗುವೆ ? ನಾನು ಯಾವ ಮನುಷ್ಯರನ್ನ ನಿಂದಿಸುತ್ತಾಯಿಲ್ಲ ಆದರೆ ಅವರ ಮನಸ್ಸುನ್ನು ನಿಂದಿಸುತ್ತಾಯಿದ್ದೇನೆ ಯಾಕೆ ಗೋತ್ತಾ ಯಾವುದೆ ಮನುಷ್ಯ ತೊಂದರೆಯಲ್ಲಿದ್ದಾಗ ಪ್ರತಿಯೊಬ್ಬ ಮನುಷ್ಯನು ಕೂಡ ಮರುಕ ಪಡುತ್ತಾನೆ ,ಅಯ್ಯೋ ದೇವರೆ ಯಾಕಪ್ಪ ಅವನಿಗೆ ಈ ಕಷ್ಟ ಕೊಟ್ಟಿದ್ದಿಯಾ,ಈ ತರಹದ ಕಷ್ಟ ಯಾವ ಮನುಷ್ಯನಿಗೂ ಕೊಡಬೇಡಪ್ಪ ಅಂಥ ಎಲ್ಲಾ ದೇವರಲ್ಲಿ ಬೇಡಿಕೊಳ್ಳುತ್ತಾರೆ ಆದರೆ ಅವರ ಮನಸ್ಸು ಮಾತ್ರ ಯಾವುದಕ್ಕು ಸ್ಪಂದಿಸುವುದ್ದಿಲ್ಲ
ಅವರು ನಮ್ಮವರಲ್ಲವಲ್ಲ ಬೇರೆ ಯಾರೊ ತಾನೇ ಬಿಡು ಅಂಥ ಹೇಳಿ ಕೆಲವರ ಮನಸ್ಸು ಕಲ್ಲ ಆಗಿರುತ್ತೆ.

ನಾನು ಯಾಕೆ ಈ ಮಾತನ್ನ ಹೇಳುತ್ತಾ ಇದ್ದೆನೆ ಅಂದರೆ ಕೇವಲ ೨ ತಿಂಗಳಲ್ಲಿ ನೋಡಿದ ಅಪಘಾತಗಳು(ನಾನು ಬೆಂಗಳೂರಿಗೆ ಬಂದಾಗಿನಿಂದ ಇಲ್ಲಿಯವರಗೆ ತುಂಬ ಅಪಘಾತಗಳನ್ನ ನೋಡಿದ್ದೆನೆ ಮತ್ತೆ ನೋಡಿ ನನ್ನ ಸಹಾಯಕ್ಕೆ ಯಾರು ಬಂದಿಲ್ಲವೇ ಅಂಥ ಮರುಕನು ಪಟ್ಟಿದ್ದೇನೆ ಅದು ಬಿಡಿ) .ನನ್ನ ಮನಸ್ಸುನ್ನ ಘಾಸಿಗೊಳಿಸಿದ ಅಪಘಾತಗಳು.

ನಾನು ರಸ್ತೆ ದಾಟುತಿರಾಬೇಕಾದರೆ ಆ ಕಡೆಯಿಂದ ೯ ವರುಷದ ಒಂದು ಹೆಣ್ಣು ಮಗು ರಸ್ತೆ ದಾಟುತ್ತಾಯಿತ್ತು,ಪಾಪ ಅದಕ್ಕೆ ಶಾಲೆಗೆ ಹೊಗೊ ಆತುರದಲ್ಲಿ ಸಿಗ್ನಲ್ ಬಿಟ್ಟಿರುವುದನ್ನು ನೋಡದೆ ದಾಟುತ್ತ ಇರಬೇಕಾದರೆ ಅತಿ ವೇಗದಲ್ಲೇ ಒಂದು ಬೈಕು ಬಂದು ಆ ಮಗುವಿಗೆ ತಾಕಿದ ತಕ್ಷಣವೆ ಆ ಹುಡುಗಿ ನನ್ನ ಕಾಲ ಹತ್ತಿರ ಬಿಳಿತ್ತು,ಪಾಪ ಆ ಬೈಕ್ ಸವಾರ ಅವನಿಗೆ ಭಯನೊ ಅಥವಾ ಅತುರದ ಕೆಲಸವೊ ಹಾಗೆ ಹೋರುಟು ಹೋದ ಆದರೆ ಆ ಹುಡುಗಿ ಭಯದಲ್ಲಿ ನಡುಗುತ್ತಾ ಇದೆ ಅಷ್ಟರಲ್ಲೆ ಎಲ್ಲಾ ಜನ ಸೇರಿದ್ದರು ,ಸೇರಿದ ತಕ್ಷಣವೆ ಎಲ್ಲರೂ ಒಂದೋಂದು ತರಹ ಮಾತಾಡಿದರು ಒಬ್ಬ ಹೇಳುತಾನೆ ಅದಕ್ಕೆ ತಲೆಗಿಲೆ ಕೆಟ್ಟಿದ್ದದ ನೋಡಿಕೊಂಡಲ್ಲವೆ ದಾಟೋದು ಇನ್ನೊಬ್ಬ ಸಾರ್ ಇದು ನಿಮ್ಮ ಮಗುನಾ ಮತ್ತೋಬ್ಬ ಆ ಬೈಕ್ ನವನಿಗೆ ಬೈಯುತ್ತಾನೆ ,ನಾನು ಅಷ್ಟರಲ್ಲೆ ಮಗು ಹೇಳಿದೆ ಬಾಮ್ಮಾ ಆಸ್ಪತ್ರೆಗೆ ಹೊಗೊಣ ಅಂಥ ಅದು ಬರಲ್ಲಿಲ್ಲ ಸರಿ ನಿಮ್ಮ ಮನೆಯಾದರು ತೋರಿಸು ನಾನು ಕರೆದುಕೊಂಡು ಹೊಗುತ್ತಿನಿ ಅಂದರು ಅದು ನಮ್ಮ ಮನೆಯಲ್ಲಿ ಹೊಡಿತ್ತಾರೆ ನಾನು ತೊರಿಸಲ್ಲ ಅಂಥ ಹೇಳುತ್ತೆ ಅಷ್ಟರಲ್ಲೆ ಒಬ್ಬ ಮುಸ್ಲಿಂ ಹಿರಿಯ ವ್ಯಕ್ತಿ ಬಂದು ಇದು ನನಗೆ ಗೊತ್ತಿರುವವರ ಮಗುವೆ ನೀವು ಹೊಗಿ ಸರ್ ನಾನು ಸಮಾದಾನ ಮಾಡಿ ಕರೆದುಕೊಂಡು ಹೋಗುತಿನಿ ಅಂಥ ಹೇಳಿದಾ, ಅಲ್ಲ ಆ ವ್ಯಕ್ತಿ ಬಂದದ್ದು ಅಪಘಾತ ನಡೆದ ಆರ್ದ ತಾಸುಗಳ ನಂತರ ಅಷ್ಟರಲ್ಲೆ ಅಲ್ಲಿದ್ದವರೆಲ್ಲ ಒಬ್ಬೊಬ್ಬರಾಗಿ ಸರ್ ಸಮಾದಾನ ಮಾಡಿ,ಸರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ,ಸರ್ ಅವಳ ಮನೆ ಕೇಳಿ ಕರೆದು ಕೊಂಡು ಹೋಗಿ ಬಿಟ್ಟಿಬಿಡಿ ಅಂಥ ಹೇಳಿ ಎಲ್ಲಾ ಹೋರಟು ಹೊದರು.

ಇನ್ನೋಂದು ಒಬ್ಬನಿಗೆ ಟಿವಿಎಸ್ ನಲ್ಲಿ ಹೋಗುತ್ತಾ ಇರಬೇಕಾದರೆ ಟ್ರಿಪ್ಪರ್ ತಗಲಿ ಅವನ ಎಡಗಾಲು ಕಟ್ಟಾಗಿದೆ ತುಂಬ ನರಳುತ್ತಾಯಿದ್ದಾನೆ ,ಟ್ರಿಪ್ಪರ್ ಚಾಲಕ ಭಯಕ್ಕೆ ಅದನ್ನ ಅಲ್ಲೇ ನಿಲ್ಲಿಸಿ ಪರಾರಿಯಾದ ಅಲ್ಲಿ ಯಾರು ಇಲ್ಲ ನಾನು ಮತ್ತೆ ನನ್ನ ಗೆಳೆಯ ಮಾತ್ರ ನಮಗೆ ಬೇರೆ ಹೊಸ ಜಾಗ ಅಲ್ಲೇ ಸ್ವಲ್ಪ ದೂರದಲ್ಲೆ ಒಂದು ಅಂಗಡಿಗೆ ಹೋಗಿ ಸರ್ ಅಲ್ಲಿ ಒಬ್ಬ ವ್ಯಕ್ತಿಗೆ ಅಪಘಾತವಾಗಿದೆ ಸಹಾಯ ಮಾಡಿ ಅಂಥ ಕೇಳಿದರೆ ಅವನು ಹೇಳುತ್ತಾನೆ ಅಂಗಡಿಯಲ್ಲಿ ಯಾರು ಇಲ್ಲ ಅದಕ್ಕೆ ನಾನು ಬರೋಕ್ಕಾಗಲ್ಲ ಬೇಕಿದ್ದರೆ ಹಣ ಕೋಡುತಿನಿ ಇಲ್ಲಾ ಆಸ್ಪತ್ರೆ ಗೆ ಪೋನ್ ಮಾಡುತೇನೆ ಆಮೇಲೆ ಹುಷಾರು ಸರ್ ಪೋಲಿಸ್ ಕೇಸ್ ಆಗುತ್ತೇ ಅಂಥ ಹೇಳುತ್ತಾನೆ ಪಾಪ ನಮ್ಮ ಅದ್ರುಷ್ಟಕ್ಕೆ ಒಂದು ಆಟೋ ಬಂತು ಆ ಯಾಪ್ಪ ಸಹಾಯಕ್ಕೆ ಬಂದ

ನನಗೆ ನನ್ನ ಗೆಳೆಯನೋಬ್ಬ ಮೊಬೈಲ್ ನಲ್ಲಿ ಮೇಸೆಜ್ ಕಳಿಸಿದ್ದ ಒಬ್ಬನಿಗೆ ರಕ್ತ ಬೇಕಾಗಿದೆ ಬೇಗ ಯಾರನ್ನಾದರೂ ಇಬ್ಬರನ್ನ ಕರೆದುಕೊಂಡು ಬಾ ಅಂಥ ನಾನು ನನಗೆ ಗೊತ್ತಿರುವವರನ್ನ ಕೇಳಿದ್ದೆ ಅದಕ್ಕೆ ಅವರು ಹೇಳಿದ್ದರೂ ನೋಡೋ ಮಗ ನಿನಗೆ ಅಥವಾ ನಿಮ್ಮ ಸಂಬಂದಿಕರಿಗೆ ಇದ್ದರೆ ಹೇಳು ನಾವು ಬರುತ್ತಿವಿ ಅದನ್ನು ಬಿಟ್ಟು ಬೇರೆ ಯಾರಿಗೋ ನಮ್ಮ ಕೆಲಸ ಬಿಟ್ಟು ಬರಬೇಕಾ ಅಂಥಾ ಸರಿ ನಾನೆ ಅಲ್ಲಿಗೆ ಹೋದೆ ಅಷ್ಟರಲ್ಲೇ ಬೇರೆ ಯಾರೊ ಕೊಡುತ್ತಾ ಇದ್ದರು

ಯಾಕೆ ಈ ತರಹ, ಎಲ್ಲರು ವ್ಯಥೆ ಪಟ್ಟರು ಆದರೆ ಮನಸ್ಸುನ್ನ ಮಾತ್ರ ಕಲ್ಲಾಗಿಸಿಕೊಂಡರು .

ಹಾಗೆ ತುಂಬ ದಿನಗಳ ಹಿಂದೆ ನನ್ನ ಕೆಲಸ ಮುಗಿಸಿಕೊಂಡು ಕಂಪನಿ ಗಾಡಿಯಲ್ಲಿ ಬರುತ್ತಾಇರಬೇಕಾದರೆ ನಮ್ಮ ಮುಂದೆ ಹೋಗುತಿದ್ದ ಬೇರೆ ಐಟಿ ಕಂಪನಿ ಬಸ್ಸು ಒಬ್ಬ ಹೆಂಗಸಿಗೆ ತಾಕಿದಾಗ ಅವಳು ಸ್ಥಳದಲ್ಲೆ ಸಾವನ್ನಾಪ್ಪಿದಳು ಅಲ್ಲಿ ಇದ್ದವರೆಲ್ಲ ಇಳಿದು ಹೋರಟು ಹೋದರು ಚಾಲಕನು ಸಹ ಅದರ ಜೊತೆಯಲ್ಲೆ ನಮ್ಮ ಕಂಪನಿ ಗಾಡಿಯೂ ಸಹ ಹೋರಟ್ಟಿತ್ತು ಆದರೆ ಬೆಳ್ಳಿಗ್ಗೆ ಪುನಃ ಆದೆ ದಾರಿಯಲ್ಲಿ ಬರುತ್ತಾ ಇರಬೇಕಾದರೆ ಆ ಬಸ್ಸು ಸುಟ್ಟು ಕರಕಲಾಗಿತ್ತು, ಅಲ್ಲಾ ಬಸ್ಸನ್ನ ಸುಟ್ಟ ತಕ್ಷಣವೆ ಹೋದ ಜೀವ ಮತ್ತೆ ಬರುತ್ತಾ , ಬಸ್ಸನ್ನ ಸುಡೊದುಕ್ಕಿಂತ ಆ ಬಸ್ಸಿನ ಮಾಲಿಕನಿಂದ ಪರಿಹಾರ ಅಂಥ ಸತ್ತ ವ್ಯಕ್ತಿಯ ಮನೆಗೆ ಕೊಡಬಹುದಿತ್ತಲ್ಲವೆ ಅನ್ನೋದು ನನ್ನ ಭಾವನೆ ಇರಲಿ ಬಸ್ಸನ್ನ ಯಾಕೆ ಸುಟ್ಟರು ಅಂಥ ನನಗೆ ಗೋತ್ತಿಲ್ಲ ಮತ್ತೆ ಮುಂದೆನಾಯಿತು ಅಂಥ ನನಗೆ ಗೊತ್ತಾಗಲ್ಲಿಲ್ಲ.

ಇಲ್ಲಿ ದೇವರು ಇದ್ದಾನೋ ಇಲ್ಲವೊ ನನಗೆ ಗೋತ್ತಿಲ್ಲ ,
ಚಿಕ್ಕವನಾಗಿ ಒಂದು ಮಾತನ್ನ ಹೇಳುತಿನಿ ಕೇಳಿ "ಇಲ್ಲಿ ನಾವೆಲ್ಲ ಮನುಷ್ಯರಾಗಿ ಹುಟ್ಟಿ ಮನುಷ್ಯರಿಗೆ ಸಹಾಯ ಮಾಡಿಲ್ಲ ಅಂದರೆ ನಮ್ಮ ಜೀವನವೆ ವೆಸ್ಟು" ಅದಕ್ಕೆ ಬೇರೆಯವರ ಕಷ್ಟನಾ ನಿಮ್ಮ ಹೊರಗಣ್ಣಿನಿಂದ ನೋಡದೆ ನಿಮ್ಮ ಒಳಗಣ್ಣಿನಿಂದ ನೋಡಿ ,
ಮನಸ್ಸುನ್ನ ಕಲ್ಲು ಮಾಡಿಕೊಳ್ಳಬೇಡಿ ಸಹಾಯ ಮಾಡಿ

ನಿಮ್ಮವ

ಮಧುಸೂದನ್ ಗೌಡ