ಓ ಮೇಘಗಳೆ ಓ ಮೇಘಗಳೆ

ಓ ಮೇಘಗಳೆ ಓ ಮೇಘಗಳೆ

ಬರಹ

ಓ ಮೇಘಗಳೆ ಓ ಮೇಘಗಳೆ
ಮೊದಲ ವರ್ಷ ಧಾರೆಯ ಸುರಿಸು
ಫಲಕೊಡುವ ಹೂವನು ಅರಳಿಸು

ಕಾಮನ ಬಿಲ್ಲನು ಮೈಯೊಳಗಿರಿಸಿದ ಪಾತರಗಳು ಕರೆಯುತಿವೆ
ಸುಂದರ ಮಕರಂದವ ಹೂವೊಳು ತುಂಬಲು ದುಂಬಿಗಳು ಕರೆಯುತಿವೆ

ಬರಡಾಗಿರುವ ವನ ಬನಗಳು ಕರೆಯುತಿವೆ
ಹಸಿರ ಕಾನನದ ನಡುವಿರುವ ಝರಿಗಳು ಕರೆಯುತಿವೆ

ವರ್ಷದ ಹರ್ಷವು ಬರುವಾಗ ಜಗದ ಕೊಳೆಯ ತೊಳೆಯಲು ಬಾ
ಅನ್ನದಾತನ ಕಣ್ಣೀರ ವರೆಸಿ ಜೀವ ನದಿಯ ತುಂಬಲು ಬಾ
ತಲ್ಲಣಿಸಿರುವ ಮನಸ್ಸಿನ ದ್ವಂದ್ವ ಕಳೆಯಲು ಬಾ

ಓ ಮೇಘಗಳೆ ಓ ಮೇಘಗಳೆ
ಮೊದಲ ವರ್ಷ ಧಾರೆಯ ಸುರಿಸು...
ಫಲಕೊಡುವ ಹೂವನು ಅರಳಿಸು...

ದಯವಿಟ್ಟು ಓದಿ