ಓ ಹೃದಯ

ಓ ಹೃದಯ

ಕವನ

ಓ ಹೃದಯ 

ಪ್ರೀತಿಯ ಹೊಳೆಯ ತೀರದಲ್ಲಿ ಮೊಗವನರಿಯದೆ ಕುಳಿತಿದ್ದೆ ನಾನು
ಮೊಗವ ತೋರಿಸಿ ,ಪ್ರೀತಿಯ ಕಡಲ ಚಿಮ್ಮಿಸಿ,ಬಂದಾದೆ ಜೀವನದ ಜೇನು .
ಜೀವನದ ವೀಣೆಯನು ಮೀಟಿದ ಹೃದಯ ನೀನು
ಸಂಗೀತವು ಇಂಪಾಗಿ ಮೆಚ್ಚುಗೆ ಮುಟ್ಟಿದೆ ಭಾನು

ಈ ಜೀವದ ಆಸೆ ಅಭಿಲಾಷೆಗಳು ,
ಈ ಪ್ರೀತಿ ಕಡಲ ಭಾರ್ಗವನು ,ಕಡಲೊಳಗಿನ ಮುತ್ತಿನ ಆಸೆಗೆ ಬೀಳಬಾರದೆಂದು ,
ಈ ಪ್ರೀತಿಯ ಒಡೆಯನ ಅಂಗೈಯಾ ಮೇಲೆ ಪ್ರಾಣ ಬಿಡಬೇಕೆಂದು .

ಮಾತಿಗೆ ಊಗುಟ್ಟು ,ಕಣ್ಣಲ್ಲಿ ಕಣ್ಣಿಟ್ಟು ,
ಮಾಡದೇ ಕಟ್ಟುನಿಟ್ಟು ಬಾಳುವೆನು ಜೊತೆಯಾಗಿ 
ಹಣೆಗೆ ಮುತ್ತಿಟ್ಟು ,ಅಂಗೈಗೆ ತಲೆ ಕೊಟ್ಟು ,
ಮಾತ್ನಾಡಿ ಒಂದಿಷ್ಟು ,ಜೀವಾನ ಮುಡಿಪಿಟ್ಟು ಹೋಗುವೆನು ಹಾಯಾಗಿ
ಬೆಳೆದಿದ್ವಿ ಕಷ್ಟಪಟ್ಟು ,ಜೋತೆಯಾದ್ವಿ ಇಷ್ಟಪಟ್ಟು ,
ಅರಿತಿದ್ವಿ ಜೀವನದ ಗುಟ್ಟು ,ಉಳಿಯಲಿ ಇವೆಲ್ಲ ನೆನಪಾಗಿ.

                                                    ಬೊ .ಕು .ವಿ

ಚಿತ್ರ್

Comments

Submitted by shejwadkar Thu, 03/28/2013 - 20:08

In reply to by Vinutha B K

ವಿನುತಾರವರೆ............
ಇದು ಹಾಗೆ ಸುಮ್ಮನೆ ಗೀಚಿದ್ದಲ್ಲ, ಭಾವನಾಲೊಕದಲ್ಲಿ ತೇಲಾಡಿ ಬರೆದದ್ದು.. ಖಂದಡಿತವಗೂ ಮನಸ್ಸು ಒಪ್ಪಿತು.
ನಿಮ್ಮ ಶ್ರಮಕ್ಕೆ ನನ್ನ ನಮನ.... :)