ಓ ಹೊಂಗಿರಣವೇ ಬಾ !

ಓ ಹೊಂಗಿರಣವೇ ಬಾ !

ಬರಹ

ಓ ಹೊಂಗಿರಣವೇ ಬಾ !

ಬಾನಿಂದ ಮಿಂಚಂತ್ತ ಹೊಂಗಿರಣವು ಪಸರಿಸಿತು,
ಜೇನಂದ ತುಂಬುತ್ತ ನನ್ನ ಹರಣವು ಫುಟಿಯಿತು,
ಭೂ-ಅಂದ ಕಾಣುತ್ತ ಕತ್ತಲಿನ ಕಸವ ತೊಳೆಯಿತು,
ಆನಂದ ಚಿಮ್ಮುತ್ತ ಜಗಜೀವವು ನಲಿಯಿತು.

ಬೆಳಗಾಯಿತು ಬಾ ಹಾರುವ ಬಾನಲ್ಲಿ ಎಂದು
ಹಕ್ಕಿಯು ಕೂಗಿತ್ತು,
"ಹೊಂಗಿರಣವೇ ಬಾ, ಚೈತನ್ಯವ ತಾ!" ಎಂದು ನೊಂದ
ಹೃದಯವು ಬೇಡಿತ್ತು,
ಉಸಿರಾಗುವೇ ಬಾ ಬಾಳಲ್ಲಿ ಹಸಿರಾಗೆಂದು ದೇಹದ
ಪ್ರಾಣವು ಕೇಳಿತ್ತು,
ಭೂಲೋಕವ ಸುತ್ತುವೇ ಬಾ ಎಂದು ಬಾಳ ಸೇತುವೆಯ
ದಾಟುವ ಬೆಳಕಿನ ಹಾದಿಯ ಕೋರಿತ್ತು.

ಹೊನ್ನಿನ ಬದುಕ ಕಾಣುವ ಬಯಕೆ ಓ ಹೊಂಗಿರಣವೇ,
ಬಾನಿನ ಮುಂಜಾನೆಯ ನಿನ್ನಾಗಮನಕೆ ನಾ ಕಾದಿರುವೇ,
ಮನಮನಕೆ ಜ್ಞಾನೋದಯವ ಮೊಡಿಸಿ ಗುರುವಾಗಿ ನಿಂತಿರುವೇ,
ಏನಾದರೂ ನನ್ನ ಬಿಟ್ಟು ಹೋಗದಿರಲೆಂದು ಬೇಡಿರುವೇ.

ಹೊಟ್ಟೆಯ ಕಿಚ್ಚಿನ ಜನರಿಗೆ ನೀಡು ಕೈಯಿಗೆ ಚೊಂಬ,
ಕರುಣಿಸು ಸಚ್ಚನರಿಗೆ ಚೈತನ್ಯವೆಂಬ ಬೆಳಕನು ಹೃದಯದ ತುಂಬ,
ಜಗದ ತುಂಬ, ಕತ್ತಲಿನ ಬಿಂಬವ ಹೋಗಲಾಡಿಸಲು ಬಾ,
ನನ್ನ ಹೃದಯದ ಕಣಕಣವು ಪ್ರಾರ್ಥಿಸುತ್ತಿರಲು

"ಓ ಹೊಂಗಿರಣವೇ ಬಾ !"

ಸ್ನೇಹದಿಂದ
ಗಣೇಶ್ ಪುರುಷೋತ್ತಮ