ಕಂಗಳು

ಕಂಗಳು

ಕವನ

ದೇಹದ ಕಳಶವೇ 

ಎರಡು ಕಂಗಳು

ಅರಿಯಲು ಜಗದಾಳ 

ದೇವನಿತ್ತ ವರಗಳು.

 

ಸುತ್ತಲಿನ ಸೊಬಗ

ಮುದವಾಗಿಸುವ ಕಂಗಳು

ಗೆಳತಿ ನಗುವ ಸಕ್ಕರೆಯ

ಮೆಲ್ಲುವ ರಸಿಕ ಕಂಗಳು.

 

ಹೊತ್ತಿಗೆಯ ಮಾತುಗಳ

ಮನದಿ ಬಿತ್ತುವ ಬಿಂಬಗಳು 

ಅರಿತು ಆದ ತಪ್ಪುಗಳ

ಕಂಡಂತೆ ಕಾಡುವ ಕಂಗಳು.

 

ಹೃದಯ ರಾಮನ

ಜಾನಕಿ ನೇತ್ರ ಕಂಗಳು

ಕಂಡ ಭಾವಕೆ

ಮಿಡಿದು ಉತ್ತರವನೀವ ರಾಮ.

 

ಕಪಟ ಜಗದಿ

ಸತ್ಯದ ಜ್ಯೋತಿಯೊಂದೇ ಕಂಗಳು

ಕಂಡ ಸತ್ಯವ

ಕಂಡಂತೆ ತೋರುವ ಸುಮಗಳು.

 

ಮನದ ನೋವು- ನಲಿವಿಗೆ

ಜೊತೆಯಾಗುವ ಸ್ನೇಹಿತ ಕಂಗಳು 

ಕಣ್ಣೀರಾಗಿ ಮನದ ಭಾರ

ಸರಿದೂಗುವ ಚಿಲುಮೆಗಳು.

 

ಆಗಸದ ಅನಂತವ ಅಳೆಯವು

ಈ ಎರಡು ಕಂಗಳು

ಅವಲೋಕನ ತೆರೆವುದು

ಒಳಗಿನ ಬೆಳದಿಂಗಳು.

 

-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್