ಕಂಗ್ಲಿಷ್ ಬರಹಗಳ ಲಿಪ್ಯಂತರಕ್ಕಾಗಿ ತಂತ್ರಾಂಶ?

ಕಂಗ್ಲಿಷ್ ಬರಹಗಳ ಲಿಪ್ಯಂತರಕ್ಕಾಗಿ ತಂತ್ರಾಂಶ?

ಬರಹ


ಯಾವುದಾದರೂ ಕನ್ನಡ ತಾಣದ ಪೇಜ್ ಗೆ ಭೇಟಿ ಕೊಡಿ (ಸಂಪದವನ್ನು ಹೊರತುಪಡಿಸಿ). ಲೇಖನ ಬಹುಶಃ ಕನ್ನಡ ಲಿಪಿಯಲ್ಲೇ ಇರುತ್ತದೆ. ಹಾಗೇ ಕೆಳಗೆ ಬಂದು ಕಮೆಂಟುಗಳನ್ನು ಗಮನಿಸಿ. ಹತ್ತರಲ್ಲಿ ಒಂಬತ್ತು ಪ್ರತಿಕ್ರಿಯೆಗಳು ಕಂಗ್ಲಿಷ್ ನಲ್ಲಿರುತ್ತವೆ. xyz ravare nimma lekhana tumba chennagide ಎಂದು ಶುರುವಾಗುವ ಪ್ರತಿಕ್ರಿಯೆ ಯಾವುದೇ ಹೊಸ ವಿಚಾರಗಳಿಲ್ಲದೆ ಹತ್ತಾರು ಸಾಲುಗಳ ನಂತರ ಕೊನೆಗೊಳ್ಳುತ್ತದೆ. ಕಂಗ್ಲಿಷ್ ನಲ್ಲಿರುವ ಆ ಪದಗಳನ್ನು ಒಂದೊಂದಾಗಿ ಹೆಕ್ಕಿ ಓದಿ ಮುಗಿಸುವ ಹೊತ್ತಿಗೆ ಆ ಪ್ರತಿಕ್ರಿಯೆ ಬರೆದವನ ಮೇಲೆ ಕೋಪ ಬಂದಿರುತ್ತದೆ!
ಅವರಂತೂ ಸುಧಾರಿಸುವುದಿಲ್ಲ, ನಾವಾದರೂ ಅದನ್ನು transliterate (ಲಿಪ್ಯಂತರ) ಮಾಡಿಕೊಂಡು ಓದೋಣ ಎಂದುಕೊಂಡೆ. ಗೂಗಲ್ transliteration ನೆರವಾಗುತ್ತದೆ ಎಂದುಕೊಂಡೆ. ಆದರೆ ಅದರಲ್ಲಿ bulk transliteration ಸೌಲಭ್ಯವಿಲ್ಲ. ಅದು ಇಡೀ ಪ್ಯಾರಗ್ರಾಫನ್ನು ಬದಲಾಯಿಸದು. ಇದಕ್ಕಾಗಿಯೇ ಹುಟ್ಟಿದ ಗೂಗಲ್ಲಿನ  ಸ್ಕ್ರಿಪ್ಟ್ ಕನ್ವರ್ಟರ್ ಎಂಬ ಪ್ರಾಜೆಕ್ಟ್ ಬಗ್ಗೆ ಯಾವ ಬೆಳವಣಿಗೆಗಳೂ ಆದಂತೆ ತೋರುತ್ತಿಲ್ಲ. ಅದ್ದರಿಂದ ನಿಮ್ಮನ್ನು ಕೇಳುತ್ತಿದ್ದೇನೆ. ನೀವು ಇದಕ್ಕೇನಾದರೂ ಉಪಾಯವನ್ನು ಕಂಡುಕೊಂಡಿರುವಿರೋ ಹೇಗೆ? ಕನ್ನಡದ bulk transliteration ಗಾಗಿ  ಯಾವುದಾದರೂ ತಂತ್ರಾಂಶ ಲಭ್ಯವಿದೆಯೇ?
ಕೊಸರು: ಇಂಗ್ಲಿಷಿನಲ್ಲಿಲ್ಲದ ವೆಬ್ಸೈಟ್ ಗಳಿಗೆ ಗೂಗಲ್ [translate this page] ಎನ್ನುವ ಒಪ್ಶನ್ ಕೊಡುತ್ತದಲ್ಲ? ಹಾಗೇ ಇಡೀ ವೆಬ್ ಪೇಜನ್ನೇ transliterate  ಮಾಡುವ ಸೌಲಭ್ಯವಿದ್ದರೆ ಇನ್ನೂ ಚೆನ್ನಾಗಿರುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet