ಕಂದನ ಗೆಳೆಯ
ಕವನ
ಚೆಂದದ ಚಂದಮ ಬಾನಲ್ಲಿ
ಅಂದದ ನಗೆಯನು ನೋಡಲ್ಲಿ
ತುಪ್ಪನ್ನದ ತುತ್ತದು ನಿನಗಿಲ್ಲಿ
ಮೆತ್ತಗೆ ಕಲಿಸಿದೆ ನಾನಿಲ್ಲಿ.
ಮೊದಲನೆ ತುತ್ತಿದು ಬಾಯಿತೆರಿ
ಚಂದಮಾಮನ ಬಾಯೆಂದು ಕರಿ
ಮಾಮನಿಗಿರಲಿ ತುತ್ತೊಂದು
ಕಂದನ ಬಾಯಿಗೆ ಮತ್ತೊಂದು.!
ಕಂದಗೆ ಮಾಮಗೆ ತುತ್ತಿನ ಆಟ
ಕಲಿಯಲು ಕಂದಗೆ ಮಗ್ಗಿಯ ಪಾಠ
ಸುಂದರ ಚಂದಿರ ನಗುತಲಿ ನಿಂದ
ಕಂದನ ಮೊಗದಲಿ ನಗುವನು ತಂದ !
ಅಮ್ಮನ ಕಂದನು ಸೊಂಟದಲಿ
ಕಲಿಸುವ ಕಲೆಯದು ನಿತ್ಯದಲಿ
ಜಗದ ಚಂದಮನವನು ಬಾನಿನಲಿ
ಮನಸಿನ ಏರಿಳಿತದ ಭಾವದಲಿ !!
-ವೀಣಾ ಕೃಷ್ಣಮೂರ್ತಿ ದಾವಣಗೆರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್