ಕಂಪಿನ ಸೊಬಗು

ಕಂಪಿನ ಸೊಬಗು

ಕವನ

ಮನೆಯ ಕುಡಿ ಅಂಗಳದ ತಂಪಲ್ಲಿ

ಜಾಜಿ, ಮಲ್ಲೆ, ಸಂಪಿಗೆಯು ಘಮದಲ್ಲಿ

ಬೆಳದು ನಿಂತಿಹ ಕುಡಿಯು ಕಣ್ಣೆದುರಿನಲ್ಲಿ

ಆಡುತಾಡುತ ಹಾಡಿ ಹಾಡಿ ನಲಿಯುತಲಿ.

 

ಪುಟ್ಟ, ಪುಟ್ಟ ಚಿಗುರು ಹಸಿರಿನೆಡೆಯಲಿ

ಜಾಜಿ ಮಲ್ಲೆ ಮೊಗ್ಗು ಇಣುಕಿ ಅರಳುವಲ್ಲಿ

ಪುಟ್ಟ ಬಾಲೆಯ ಕಣ್ಣಲ್ಲಿ ಬೆರಗು ತುಂಬಿತಲ್ಲಿ

ಚೆಂದದಂದವ ನೋಡುತ ಘಮವು

ಎಳೆದಿರುತಲಿ.

 

ಅಂಗಳದ ತುಂಬೆಲ್ಲಾ ಮಲ್ಲಿಗೆಯ ಕಂಪಡರಿ

ಉಲ್ಲಾಸ ವಿಕಸಿತವು ಮನದಲ್ಲಿ ನವಪರಿ

ತನುಮನಕೆ ಮುಡಿವ ಬಯಕೆ ಮೂಡಿತಲ್ಲಿ 

ಮುತ್ತಿನ ಮಲ್ಲಿಗೆಯು ನಾಚಿ ಬಾಗಿದಳಲ್ಲಿ.

 

ಜಾಜಿ ಮಲ್ಲಿಗೆ ಚೆಲುವು ಕಂಪಿಗದು ಸೊಬಗು

ಚೆಲುವಿನೊಡನೆ ಕಂಪಿನ ನಂಟು ಬಲು ಸೊಗಸು

ಚಿತ್ತ ಭಾವವು ಅರಳಿ ಕಂಪಿನಲಿ ನುಸುಳಿ

ಬೆಳೆದಿಹಳು ಬಾಲೆ ನವ ಯುವತಿಯಾಗಿ.

 

ಮನಯಂಗಳದ ಪುಟ್ಟ ಕುಡಿಯು ನಲಿವಾಗ

ನವಭಾವವದು ತನುವ ತುಂಬಿ ಉಲಿದಳು ಅಲ್ಲಿ

*ಹೂ* ಅರಳಿ ತಂಪು ಸೂಸಲು ಧಾರೆ ಎರೆದರಲ್ಲಿ

ಮುಡಿ ತುಂಬ ಘಮಘಮಿಸುವ*ಮಲ್ಲೆ* ಮಾಲೆಯಲ್ಲಿ. !

 

-ವೀಣಾ ಕೃಷ್ಣಮೂರ್ತಿ, ದಾವಣಗೆರೆ.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್