ಕಂಪ್ಯೂಟರ್ ಉವಾಚ
ಬರಹ
ನಾನೊಂದು ಕಂಪ್ಯೂಟರ್
ನನಗೂ ನಿನಗೂ ಏನು ವ್ಯತ್ಯಾಸ?
ಪ್ರತಿಸಲವೂ ನನ್ನನು ಮಾತ್ರ
ಎಬ್ಬಿಸುವುದು ಕಾಲಿನಲ್ಲಿ ಒದ್ದು ಒದ್ದು
ನಿನಗೆ ಹಾಗೆ ಮಾಡಲು
ರಂಪ ಮಾಡುವೆ ಬಿದ್ದು ಬಿದ್ದು
ನನ್ನಲಿಹುದು ಹಾರ್ಡ್ ಡಿಸ್ಕ್
ಅದೆಂದೂ ಸುಲಭದಿ ಹಾಳಾಗದು
ನಿನ್ನಲ್ಲೂ ಇಹುದೊಂದು ಬುರುಡೆ
ಅಲ್ಪ ಸ್ವಲ್ಪಕೂ ಬಿಸಿಯಾಗುವುದು
ಕಾಲಕ್ಕೆ ತಕ್ಕಂತೆ ನನ್ನ ಪಿ ೪ ಸ್ಪೀಡು ೮೮೮
ನಿನಗೆ ತಿಳೀದಿರೋದು ಬುಸುಗುಡುವ ೫೫೫
ನನ್ನ ರ್‍ಯಾಮಿನ ಕೆಪ್ಯಾಸಿಟಿ ೨ ಜಿಬಿ
ನನ್ನ ಮುಂದೆ ನೀನೊಂದು ದೊಡ್ಡ ಗೂಬೆ
ನನ್ನಲಿಹುದೊಂದು ಪುಟ್ಟ ಮೌಸು
ಅದನು ಹಿಡಿಯಲು ನೀ ಹಾಕಬೇಕಿಲ್ಲ ಗ್ಲೌಸು
ನನ್ನನು ತಿಳಿಯಲು ನಿನಗಿರಬೇಕು ಬುದ್ಧಿ
ನಿನ್ನನು ತಿಳಿದವರೆಲ್ಲರೂ ದೊಡ್ಡ ಬುದ್ದೂ
ಜೀವಿಸಿರಲು ನನಗೆ ಬೇಕು ವಿದ್ಯುತ್
ನಿನಗೆ ಜೀವಿಸಲು ಬೇಕು ಪ್ರಾಣ
ವಿದ್ಯುತ್ ಹೋದರು ಮರಳಿ ಬರುವುದು
ನಿನ್ನ ಪ್ರಾಣ ಹೋದರೆ ಮತ್ತೆ ಮರಳುವುದೇ?
ನನ್ನಲಿ ಎಲ್ಲ ಓಎಸ್, ಸಾಫ್ಟ್‍ವೇರ್ ಗಳು ಜೀರ್ಣ
ಕೊಂಚ ಹೆಚ್ಚು ಕಡಿಮೆಯಾಗಲು ನಿನಗೆ ಅಜೀರ್ಣ
ನನ್ನಿಂದ ಜಾಲಾಡುವವರು ವಿಶ್ವದಲ್ಲೆಲ್ಲಾ
ನಿನ್ನ ಲೋಕ ಮಾತ್ರ ನೀ ನಿಂತಿರುವೆಡೆಯಲ್ಲ
ಆದರೂ ನನ್ನ ಕರ್ತೃ ನೀನಿಲ್ಲದೇ ನಾನಿಲ್ಲ
ಕಾಯುತಿಹೆ ನಾನಿಲ್ಲದೇ ನೀನಿಲ್ಲದ ದಿನಕಾಗಿ