'ಕಚೇರಿ ಸಲ್ಲಾಪ' - ಕಕ್ಷಿಗಾರ ಉವಾಚ (2)

'ಕಚೇರಿ ಸಲ್ಲಾಪ' - ಕಕ್ಷಿಗಾರ ಉವಾಚ (2)

ನೀವು ಗಂಡ ಹೆಂಡತಿ ಹಿರಿಯ ನಾಗರಿಕರಿದ್ದೀರಿ! ನಿಮ್ಮ ಮಗನ ಮದುವೆಯ ನೋಂದಣಿ ಆಗಬೇಕು ಅಂತ ಕೇಳಿ ನನ್ನ ಕಚೇರಿಗೆ ಬಂದಿದ್ದೀರಿ! ನಿಮ್ಮ‌ ಮಗ ಸೊಸೆ ನಿಮ್ಮೊಂದಿಗೆ ಕಾಣ್ತಾ ಇಲ್ಲ! ನಿನ್ನೆ ನೀವೇ ಫೋನ್ ಮಾಡಿ ಮದುವೆ ನೋಂದಣಿಗೆ ಏನೆಲ್ಲಾ ಆಗಬೇಕಿದೆ ಅಂತ ನನ್ನಲ್ಲಿ ಕೇಳಿ ತಿಳಿದಿದ್ದೀರಿ! ನೀವ್ಯಾಕೆ ನಿಮ್ಮ ಮಗನನ್ನು ನನ್ನ ಅಫೀಸಿಗೆ ಹೋಗುವಂತೆ ಹೇಳಿ ಜವಾಬ್ಧಾರಿ ವಹಿಸಿಕೊಳ್ಳಲು ಹೇಳಿಲ್ಲ?! ಮಕ್ಕಳ ಮದುವೆ ನೋಂದಣಿಯ ಕೆಲಸಕ್ಕೂ ನೀವೇ ಯಾಕೆ ಓಡಾಡಬೇಕು?! 

ಕಕ್ಷಿಗಾರ್ತಿ: "ನಮ್ ಮಗಂಗೆ ಉಡುಪಿಯಲ್ಲಿ ಓಡಾಡಿ ಗೊತ್ತಿಲ್ಲ ಸಾರ್! ಆತ ಕೆಲಸ ಸಿಕ್ಕಿದ್ಮೇಲೆ ಹನ್ನೆರಡು ವರ್ಷದಿಂದ ಡೆಲ್ಲಿಲೇ ಬೆಳೆದೋನು! ನಮ್ಮ ಸೊಸೆ ಮುಂಬೈಯ್ಯಲ್ಲೇ ಬೆಳೆದವ್ಳು. ಸಾಫ್ಟ್ವೇರ್ ಇಂಜಿನಿಯರ್! ವ್ಯವಹಾರ ಜ್ಞಾನ ಕಡಿಮೆ ಸರ್! ಹಾಗಾಗಿ ನಾನೇ ಫೋನ್ ಮಾಡಿ ಬಂದೆ! ತಿಂಗಳು ಕಳೆದು ಇಬ್ರೂ ಯು.ಕೆ.ಗೆ ಹೋಗ್ತಾರೆ. ಅರ್ಜೆಂಟಾಗಿ ಮೆರೇಜ್ ಸರ್ಟಿಫಿಕೇಟ್ ಬೇಕಂತೆ ! ಹಾಗಾಗಿ ನಾನೇ ನಿಮ್ಮಲ್ಲಿಗೆ ಬಂದೆ ಸರ್! ನಾಳೆ ರಿಜಿಸ್ಟ್ರೇಶನ್ನಿಗೆ ಮಗ-ಸೊಸೆನ ಕರ್ಕೊಂಡ್ ಬರ್ತೀನಿ ಸರ್! (.......ಮುಖದಲ್ಲಿ ಅಸಹಾಯಕ ಮುಗುಳ್ನಗು) 

(ಒಳ್ಳೇ ಕೆಲ್ಸ ಮಾಡಿದ್ರಿ ಅಂತ ನಾನೂ ಪೋಸ್ ಕೊಟ್ಟು ಮುಗುಳ್ನಕ್ಕೆ...) 

*ವಕೀಲಿ ವೃತ್ತಿಯು ಹಚ್ಚಿದ ಜ್ಯೋತಿಯು ಸಮಾಜದ ಕತ್ತಲೆಯ ಮೂಲೆ ಮೂಲೆಗೂ ತನ್ನಗ್ನಿ ದೇಹದಿಂದ ಬೆಳಕನ್ನು ಹರಿಸಿ ನಿತ್ಯ ಹೊಸ ಹೊಸತನ್ನು ತೋರಿಸುತ್ತಲೇ ಇರುತ್ತದೆ!*

- ‘ಮೌನಮುಖಿ’ ಆತ್ರಾಡಿ ಪೃಥ್ವಿರಾಜ್ ಹೆಗ್ಡೆ, ನ್ಯಾಯವಾದಿ & ನೋಟರಿ, ಉಡುಪಿ