ಕಟೋರ

ಕಟೋರ

ಕವನ

 

 

ಅನ್ಯಾಯದೊಡನೆ ರಾಜಿ

ನನಗಿಷ್ಟವಿಲ್ಲ

ಸತ್ಯಕ್ಕಾಗಿ ನಿಲ್ಲುವುದು

ಅಷ್ಟು ಸಲೀಸಲ್ಲ

 

ಕಗ ಮೃಗಗಳಿಗಿಗ೦ಜಿದರೆ

ಕಾಡಿನ ಸವಿ ಕಾಣಲಾಗುವುದಿಲ್ಲ

ಬೆಳಕನೀವ ದೀಪದ ಕಿಡಿ ತನ್ನೆ ತಾನು

ದಹಿಸದೆ ಕತ್ತಲ ಕೊಲೆ ಸಾದ್ಯವಿಲ್ಲ     

 

ನೋವನುಣದೇ ತಾಯಿ

ಮಗುವನೆರುವ ಕನಸು ಪಲಿಸುವುದಿಲ್ಲ

ವಿಷದ ಗುಳಿಗೆ ಗ೦ಟಲಿಗಿಳಿಲಿಯದೆ

ರೋಗದಿ೦ದ ಮುಕ್ತಿಯಿಲ್ಲ 

 

ಶಿಲಿಬೇಗೇರದೇ ಏಸು 

ಕ್ರಿಸ್ತನಾಗಲಿಲ್ಲ

ಸುಖವ ತೊರೆಯದೆ ಬುದ್ದ

ಬುದ್ದನಾಗಲಿಲ್ಲ

 

ಭಗತ್ ಸಿ೦ಗ್ - ನೇತಾಜಿ

ಕೊರಳು ಕೊಡದೆ 

ಗಾ೦ಧಿಜೀ ತ೦ದುಕೊಟ್ಟರೆ೦ಬ

ಸ್ವಾತಂತ್ರ್ಯಕರ್ಥವಿಲ್ಲ

 

ಕಷ್ಟವಾದರೂ ಸರಿಯೇ

ಸತ್ಯಾದಾದಿಯಲೆ೦ದು ಸೋಲು

ಸುಳಿಯುವುದಿಲ್ಲ

ಹೂ ಅರಳಲು ಸೂರ್ಯನ ಕಾ೦ತಿ ಬೇಕೆಬೇಕಲ್ಲ

 

 

 

 

 

 

 

 

 

 

 

Comments