ಕಡಲೇ ಬಾನು

ಕಡಲೇ ಬಾನು

ಕವನ

ಕೈಹಿಡಿಯುತ ನಡೆಸಿ

ಮನೆಯೊಳಗೆ ಕರೆತಂದೆ

ನನ್ನೊಲವಿನ ರಾಣಿ ಮೊದಲ ಸವಿಯೆ

ವೀಣಾ ನಾದವು ಹೊಮ್ಮಿ

ಮನವೆಲ್ಲ ತಿಳಿಯಾಗೆ

ಹೊಂಗನಸು ಮೂಡಿತು ಸುತ್ತ ಸಿಹಿಯೆ

 

ಹೃದಯದಾಳಕೆ ಇಳಿದ

ನಲ್ಲೆಯೊಲವಿನ ಛಾಯೆ

ನನಸಾಗುವ ಗೆಲುವು ಬಂದು ಸೇರೆ

ಪ್ರೀತಿ ಉಬ್ಬರದೊಳಗೆ

ಏನು ಕೇಳದೆ ಹೋಯ್ತು

ತನುವ ಕೊಳವದುಯೀಗ ಮೋಹ ಬೀರೆ

 

ನಗುವೊಂದು ಮೊಗದೊಳಗೆ

ಮೂಡಿ ಮರೆತಿದೆ ನೋವ

ನಲಿವು ಕಾಣುತಲಿರಲು ಹೊನ್ನ ಕಿರಣ

ತುಟಿಯರಳಿ ಸವಿಜೇನು

ನಮ್ಮಿಬ್ಬರಾ ಒಳಗೆ

ಮಿಳಿತವಾಗುತ ಸಾಗೆ ಕಡಲೇ ಬಾನು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್