ಕಡಲ ತಡಿಗೆ ಹೊಡೆದು ಹೊಡೆದು ....

ಕಡಲ ತಡಿಗೆ ಹೊಡೆದು ಹೊಡೆದು ....

ಕವನ

 

ಕಡಲ ತಡಿಗೆ ಹೊಡೆದು ಹೊಡೆದು 
ಮೊರೆಯುತಿರುವ ಅಲೆಗಳು
 
ಸುಡುವ ಮುಖದ ಸೂರ್ಯ ಅಲ್ಲೆ
ಕಳೆದಿಹ ಹಲ ಯುಗಗಳು
 
ಬಿಡದೆ ಬೆಸ್ತ ಬೀಸಿ ಎಸೆದ 
ಮೀನ ಹಿಡಿವ ಬಲೆಗಳು
 
ಬಿಡಿ ಮರಳಿನ ಮೇಲೆ ನಡೆವ
ಅರೆ ಬೆತ್ತಲ ಜನಗಳು
 
ತಡೆ ಇಲ್ಲದ ಈ ನೋಟಕೆ
ಎಂದೂ ಸಿಗದು ಗೆಳೆಯ
ಹಿಡಿದ ದುಃಖ ಹೊರಗೆಡಹದ
ಮೌನದ ಕೆಲ ಮನಗಳು
-ಮಾಲು