ಕಡಲ ಸಾಲು ಹಕ್ಕಿ
ಕವನ
ಬಿಳಿಯ ಬಣ್ಣದ ಕೆಂಪು ಕೊಕ್ಕಿನ |
ನೀಳ ಕಾಲಿನ ಕುಸುರಿ ಗಣ್ಣಿನ |
ಇಳೆಯ ಸುಂದರ ಸೃಷ್ಟಿ ಸೊಬಗಿನ |
ವರುಣ ಮಿತ್ರರ ಹೊಟ್ಟೆ ಪಾಡಿನ |
ಸರಳ ಸಾಲಿನ ಸಭೆಯು ನಡೆದಿದೆ ||
ನಿದ್ದೆ ಮಾಡದೆ ಸದ್ದು ಇಲ್ಲದೆ |
ಸುದ್ದಿಯಾಗದ ನಿತ್ಯ ಜೀವನ |
ತಂತ್ರ ಹೆಣೆಯುವ ಮಂತ್ರ ಸಭೆಯಲಿ |
ಎದ್ದು ಹಾರದೆ ಭಿನ್ನಮತದಲಿ |
ತಿರುಗಿ ಬಿದ್ದಿದೆ ಸಭೆಯ ಮಧ್ಯದಿ ||
ಬಾಲಸೂರ್ಯನ ಹೊಳೆವ ಕಿರಣದ |
ಸ್ಫೂರ್ತಿ ಸ್ನಾನದಿ ಶಕ್ತಿ ಪಡೆಯುತ |
ಬೇಟೆಯಾಡುವ ನವ್ಯ ಸೂತ್ರದ |
ಪವನ ಮಾನದಿ ಲೆಕ್ಕ ಹಾಕುತ |
ಮನನ ಮಾಡಿವೆ ಮತ್ಸ್ಯ ಹನನಕೆ ||
Comments
ಜಯ ಪ್ರಕಾಶ ರವರೆ ವಂದನೆಗಳು
ಜಯ ಪ್ರಕಾಶ ರವರೆ ವಂದನೆಗಳು
' ಕಡಲ ಸಾಲು ಹಕ್ಕಿ ' ಒಂಣದು ಸುಂದರ ಕವನ ಬಿಚ್ಚಿಕೊಳ್ಳುವಲ್ಲಿ ಒಂದು ಲಾಸ್ಯವಿದೆ, ಓಟದಲ್ಲಿ ಓಘವಿದೆ, ಆಂತರ್ಯದಲ್ಲಿ ಅರ್ಥವಿದೆ, ಭಾಷೆಯಲ್ಲಿ ಗಹನತೆಯಿದೆ, ಉತ್ತಮ ಕವನ ಧನ್ಯವಾದಗಳು.
In reply to ಜಯ ಪ್ರಕಾಶ ರವರೆ ವಂದನೆಗಳು by H A Patil
ಶ್ರೀಯುತ ಪಾಟೀಲರೆ ನಿಮ್ಮ ಕಮನೀಯ
ಶ್ರೀಯುತ ಪಾಟೀಲರೆ ನಿಮ್ಮ ಕಮನೀಯ ಪ್ರಾಸಬದ್ಧ ಮೆಚ್ಚಿಕೆಗೆ ವಂದನೆಗಳು
ಜಯಪ್ರಕಾಶ