ಕಡೂರಿನ ದಿನಗಳು - ಅಣ್ಣನ ಅಣಿಮುತ್ತುಗಳು! ಭಾಗ‌ ‍೨

ಕಡೂರಿನ ದಿನಗಳು - ಅಣ್ಣನ ಅಣಿಮುತ್ತುಗಳು! ಭಾಗ‌ ‍೨

ಕಡೂರಿನ ದಿನಗಳು - ಅಣ್ಣನ ಅಣಿಮುತ್ತುಗಳು!

ಈ: ಈಗ್ಗೆ, ಈನಾಡಿ,

ಈಗ್ಗೆ: ಇದು ಒಂದು ಆಡುವ ಕನ್ನಡ ಪದ. ಈಗ್ಗೆ ಅಂದರೆ "ಈವಾಗಿನ ಸಮಯಕ್ಕೆ" ಅಂದ ಅರ್ಥೈಸಿಕೊಳ್ಳಬಹುದು. ಉದಾ: ಈಗ್ಗೆ ಏನಡಿಗೆ? ರಾತ್ರಿಗೇನೋ ಅವರ ಮನೆಗೆ ಊಟಕ್ಕೆ ಹೋಗ್ತಿದೀವಿ.

ಈನಾಡಿ: ಅಂದರೆ, ಆನಾಡಿ ತರಹವೇ ಇಷ್ಟೊಂದು ಅನ್ನೋ ಅರ್ಥ (ಜಾಸ್ತಿ, ಬಹಳ) ಕೊಡುತ್ತದೆ.

ಉ: ಉರುಟಲು, ಉಂಡಾಡಿ, ಉಡಾಫೆ

ಉರುಟಲು: ಅಂದರೆ, ಯಾರಾದ್ರು ಯಾವಾಗಲೂ ಸರಿಯಾಗಿ ನೋಡದೆ, ಎಲ್ಲ ಉರುಟುತ್ತಿದ್ದರೆ ಅವರಿಗೆ "ಅವನೊಬ್ಬ ಉರುಟಲು ಅಂತ ಹೇಳ್ತಾರೆ"

ಉಂಡಾಡಿ: ಅಂದರೆ, ಕೆಲಸಮಾಡದವ ಬರೀ ಊಟಕ್ಕೆ ಹಾಜರ್, ಕೆಲಸಕ್ಕೆ ಚಕ್ಕರ್ ಅಂತವರಿಗೆ "ಉಂಡಾಡಿ ಗುಂಡ" ಅಂತ ಕರೀಬಹುದು.

ಊ: ಊನ,

ಊನ : ಅಂದರೆ, ಎನಾದರೂ ಡಿಫಿಶಿಯನ್ಸಿ ಇರುವುದು ( ಸಂಪೂರ್ಣತೆಯಲ್ಲಿ ಕುಂದು ಇರುವುದು, ಅಂಗಾಂಗಳಲ್ಲಿ ಕುಂದು ಇದ್ದರೂ ಊನ ಎಂದು ಉಪಯೋಗಿಸುತ್ತಾರೆ)

ಋ: ಋಜುವಾತು, ಅಂದರೆ ಸಹಿ ಹಾಕುವುದು (ಒಂದು ತರಹ ಸಾಕ್ಷಿಯಾಗಿ ಸಹಿ ಹಾಕುವುದು...ಹಾಕಿ ಖಚಿತಪಡಿಸಿಕೊಳ್ಳುವುದು.)

ೠ: ೠವಾಟು, ಅಂದರೆ ಒಂದು ತರಹ "ಮಧ್ಯಸ್ಥಿಕೆ ವಹಿಸುವುದು".

ಎ: ಎಪ್ಪೆಪ್ರು - ಎಬ್ಬಂಕು, ಅಂದರೆ ಸ್ವಲ್ಪ ಮಂದ ಬುದ್ಧಿಯುಳ್ಳವನು, ಸ್ವಲ್ಪ ಎಕ್ಸೆಂಟ್ರಿಕ್ ಅಂತಲೂ ಅರ್ಥೈಸುತ್ತಾರೆ.

ಏ: ಏರಿ, ಅಂದರೆ ದಡದ ದಿಬ್ಬ - ಕೆರೆಯ ಏರಿ ಮತ್ತು ಹತ್ತುವುದೂ ಅಂತಲೂ ಅರ್ಥವಾಗುತ್ತೆ (ತೇರ ಏರಿ).

ಒ, ಓ, : ಒಪ್ಪ, ಓರಣ

ಒಪ್ಪ, ಓರಣ: ಸ್ವಲ್ಪ ಹೆಚ್ಚೂ ಕಡಿಮೆ ಒಂದೇ ಅರ್ಥ ಕೊಡುತ್ತೆ. ಎಲ್ಲ ಚೆನ್ನಾಗಿ ಜೋಡಿಸಿಟ್ಟಿರುವುದಕ್ಕೆ "ಒಪ್ಪ" ಮತ್ತು ಸಾಲಾಗಿ ಜೋಡಿಸಿರುವುದಕ್ಕೆ, ಎಲ್ಲೆಲ್ಲಿರಬೇಕೋ ಅಲ್ಲಲ್ಲಿ ಜೋಡಿಸಿರುವುದಕ್ಕೆ "ಓರಣ" ಅಂತ ಕರೀತಾರೆ.

ಔ: ಔರೋಪ್ಯ, ಔಷಧೋಪಚಾರ,

ಔರೋಪ್ಯ: ಅಂದರೆ ಯುರೋಪ್ ದೇಶಗಳಿಗೆ ಸಂಬಂಧಿಸಿದ್ದು. ಉದಾ: ಔರೋಪ್ಯ ದೇಶಗಳಲ್ಲಿ ಚಳಿ ಜಾಸ್ತಿ.

ಔಷಧೋಪಚಾರ: ಅಂದರೆ, ಔಷಧಿ ಜೊತೆಗೆ ಇತರ ಉಪಚಾರಗಳನ್ನು ಒದಗಿಸುವುದು.

ಅಂ : ಅಂಬೋಣ ಅಂದರೆ "ಹೇಳುವುದು, ಹೇಳಿದ್ದು" ಅಂದರ್ಥವಾಗುತ್ತೆ.

ಅಃ: ಅಕ್ಷರಷಃ ಅನ್ನೋ ಪದವನ್ನು (ಅಃಕ್ಷರಷಃ) ಅಂದರೆ, ಖಂಡಿತವಾಗಿಯೂ, ನಿಜವಾಗಿಯೂ ಅನ್ನೋ ಅರ್ಥ ಕೊಡುತ್ತದೆ.



 

Comments

Submitted by rasikathe Fri, 04/12/2013 - 23:07

ಮೇಲಿನ‌ ಪದಗಳ‌ ಮಾಲೆಯಲ್ಲಿ ಅಕಸ್ಮಾತ್ ಆಗಿ "ಐ" ಮಿಸ್ ಆಗಿದೆ. ಐ: ಐಲು , ಅಮ್ದರೆ ಒಮ್ದು ತರ‌ ಅರೆ ಹುಛ್ಛು, ಬುದ್ಧಿ ಮಾಮ್ದ್ಯ‌ ತರ‌ ಅರ್ಥವಾಗುತ್ತೆ. ಧನ್ಯವಾದಗಳು ಮೀನಾ
Submitted by nageshamysore Sat, 04/13/2013 - 04:23

ಮೀರಾ ಅವರೆ, ಚೆನ್ನಾಗಿದೆ ಪದ ಸಂಗ್ರಹಣೆ. ನೀವು ಮೆಡಿಕಲ್ ಫೀಲ್ಡಿನಲ್ಲಿರೋದ್ರಿಂದ ಬಹುಷಃ ಕೆಲವು ಸಾಮಾನ್ಯ ಬಳಕೆಯ ವೈದ್ಯಕೀಯ ಪದಗಳಿಗೂ ಕನ್ನಡ ಅವತರಣಿಕೆ, ವಿವರಣೆ ಕೊಡಲು ಸುಲಭವೇನೊ ಅನ್ಸುತ್ತೆ (ಆಗಲೆ ಮಾಡಿದ್ದೀರೊ ಏನೊ ಗೊತ್ತಿಲ್ಲ..) - ನಾಗೇಶ ಮೈಸೂರು, ಸಿಂಗಪುರದಿಂದ