ಕಡೇಪಕ್ಷ ಇಷ್ಟನ್ನಾದರೂ ನೀವು ಜೀವನದಲ್ಲಿ ಓದಲೇಬೇಕು
ಬರಹ
ಮಾಸ್ತಿ ವೆಂಕಟೇಶ ಅಯ್ಯಂಗಾರರು ಮತ್ತು ಜಯಂತ ಕಾಯ್ಕಿಣಿಯವರು ಬರೆದ ಎಲ್ಲ ಕತೆಗಳನ್ನು ಒಂದು ಬಾರಿಯಾದರೂ ನಮ್ಮ ಜೀವನದಲ್ಲಿ ಓದಲೇಬೇಕು . ನಮ್ಮ ಜೀವನದ ಬಗ್ಗೆ ನಮ್ಮ ಧೋರಣೆಯನ್ನೇ ಬದಲಿಸುತ್ತವೆ ಈ ಬರಹಗಳು.
ಅತಿ ಶ್ರೇಷ್ಠ ಮಟ್ಟದ ಹಾಸ್ಯ ಬೇಕೆಂದರೆ ಬೆಸ್ಟ್ ಆಫ್ ಅ.ರಾ.ಸೇ ಮತ್ತು ಬೆಸ್ಟ್ ಆಫ್ ಕೇ.ಫ ಓದಬೇಕು.
ಒಳ್ಳೇ ರೋಮಾಂಚಕ ಸಾಹಿತ್ಯ ಬೇಕೆಂದರೆ ತೇಜಸ್ವಿಯವರ ಜುಗಾರಿಕ್ರಾಸ್.
ಸಭ್ಯತೆಯ ಗಡಿಮೀರದ ಸರಸ ಸಾಹಿತ್ಯಕ್ಕೆ ಈಶ್ವರಯ್ಯ ಬರೆದ 'ಸರಸ' ( ಭಾಗ ೧ ಮತ್ತು ೨) ನೋಡಿ .
ಮಾಸ್ತಿ ವೆಂಕಟೇಶ ಅಯ್ಯಂಗಾರ ಬರೆದ 'ಶ್ರೀರಾಮ ಪಟ್ಟಾಭಿಷೇಕ' ಕೂಡ ಓದಲೇಬೇಕು.
ಇವಿಷ್ಟು ನನ್ನ ರಾಶಿ ರಾಶಿ ಓದಿನ ನಂತರ 'ಕಡೇಪಕ್ಷ ಇಷ್ಟನ್ನಾದರೂ ನೀವು ಓದಲೇಬೇಕು' ಎಂದು ಬಯಸುವ ಪುಸ್ತಕಗಳ ಪಟ್ಟಿ .