ಕಣಕಣದಲ್ಲಿ ಬೆರೆತಿರುವೆ

ಕಣಕಣದಲ್ಲಿ ಬೆರೆತಿರುವೆ

ಕವನ

ಕಣಕಣದಲ್ಲಿಯು ಬೆರೆತಿಹ ಪ್ರೇಯಸಿ

ತನುಮನ ನಿನ್ನನೆ ಆಶಿಸಿದೆ

ಸನಿಹಕೆ ಬಂದರೆ ದೂರಕೆ ಸರಿಯುವೆ

ಇನಿಯನ ಕಾಡುವೆ ಇದು ಸರಿಯೆ?

 

ನಗುವಿನ ಮೊಗದಲಿ ಗಲ್ಲದ ಈ ಗುಳಿ

ಕಚಗುಳಿ ಇಡುತಿದೆ ಮುಂಗುರಳು

ತಾರೆಯ ಹೊಳಪಿನ ಸುಂದರ ಕಣ್ಗಳು

ಕಾಡುತಲಿರುವುದು ಹಗಲಿರುಳು

 

ನೆನಪಿನ ಹಕ್ಕಿಗೆ ಸರಪಳಿ ಬಿಗಿಯುತ

ಮನಸಿನ ಗೂಡಲಿ ಬಂಧಿಸಿದೆ

ಕನಸನು ಕಾಣಲು ಆಸ್ಪದೆ ಎಲ್ಲಿದೆ?

ಮನವಿದು ವಿರಹದಿ ನಿದ್ರಿಸದೆ

 

ಒಲವಿನ ಬೇಡಿಕೆ ಇರಿಸಿದೆ ನಿನ್ನಲಿ

ಒಲ್ಲೆನು ಎನ್ನದೆ ಬಳಿ ಬಾರೆ

ಬಲ್ಲೆನು ನಿನ್ನಲಿ ಅವಿತಿಹ ಪ್ರೇಮವ

ಬದುಕಲಿ ಸಂಭ್ರಮ ನೀ ತಾರೆ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್