ಕಣಿಪುರದೊಡೆಯ
ಕವನ
ಕಣಿಪುರದೊಡೆಯ ದೇವಕಿ ತನಯ |
ಪುಂಡರೀಕಾಕ್ಷ ಪುರಂದರ ವಿಠಲ ||
ಹಣ್ಣು ಹಾಲು ಹೂವು ತಂದೆ
ಚೆಂದದಿಂದ ಒಲಿದು ಬಾರೋ |
ಮುದ್ದು ಕೃಷ್ಣ ಚೆಲುವ ಕೃಷ್ಣ
ನೀಡೋ ದರುಶವ ನಮಗೇ ||
ಬಾರೋ ನೀನು ಕೊಳಲ ನೂ ದುತ
ತೋರೋ ನಿನ್ನ ವಿಶ್ವ ರೂಪವ |
ಎಂಥ ನಿನ್ನ ದಿವ್ಯ ಸನ್ನಿಧಿ
ಚಿಂತೆ ಒಂದಿನಿತು ಇಲ್ಲ ||
ಮನದಲೀ ಹರುಷ ತಂದೆ
ಅಭಿನಯ ವರದ ನಮ್ಮ ದೇವ |
ಯುಕ್ತಿಯಿಂದ ಸಲಹುವ ದೇವ
ಚಿನ್ಮಯ ರೂಪ ಕಣಿಪುರದೊಡಯ ||
-ಸುಭಾಷಿಣಿ ಚಂದ್ರ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್