ಕಣ್ಣಲೇ ಕರೆಯೋಲೆ

ಕಣ್ಣಲೇ ಕರೆಯೋಲೆ

ಕವನ

ಹಾರುವ ಹಕ್ಕಿಯ ಗೂಡಲಿ ಬಂಧಿಸೆ

ಹಾರುವುದೆಂತದು ಹೊರಗಡೆಗೆ

ಹೂವಿನ ದಳಗಳ ಒಳಗಡೆ ಸಿಲುಕಿದ

ದುಂಬಿಯು ಬಂಧಿತ ಹೂವೊಳಗೆ

 

ಪ್ರೀತಿಯ ನೋಟದ ಔತಣ ತೊರೆವೆನೆ?

ಕಣ್ಣಲೆ ನೀಡುವೆ ಕರೆಯೋಲೆ

ಸರಸದ ಸವಿಯಲಿ ಮೈಯನು ಮರೆತಿರೆ

ಬಂಧಿತನಾದೆನು ಒಲವಿನಲೆ

 

ಜಗವನು ಮರೆಸುವ ಒಲವಿನ ಸಿಂಚನ

ಪುಳಕಿತಗೊಳಿಸುವೆ ಪ್ರೇಮದಲಿ

ವೇಳೆಯ ಕಳೆಯದೆ ಬಾರೆಯ ಸನಿಹಕೆ

ಸೇರಿಕೊ ನನ್ನಯ ತೋಳಿನಲಿ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್