ಕಣ್ಣಳತೆ ದೂರ
ಕವನ
ಕಣ್ಣಳತೆ ದೂರ, ಕಣ್ಣಿನ ಹನಿಯೊಂದು ಜಿನುಗುತಿದೆ.
ತುಂಬಾ ಸನಿಹ ಸುಳಿದು ನಾನು, ಹಾಗೆ ಹಿಂತಿರುಗಿದೆ.
ಜಿನುಗಿದ ಹನಿ ಕಾಣದಿರಲೆಂದು...
ಎಲ್ಲಿಂದಲೋ ಕೇಳಿತು ನಗೆಯ ದನಿ,
ಅದ್ಯರಿಗೋ ಹಾಗಲೇ ಮೀಸಲೆಂದು, ಮನ ಗುನುಗಿತು.
ಕಣ್ಣಳತೆ ದೂರ, ಸಾಗರದ ತೀರ.
ಏನೇ ನಡೆದರು, ನನ್ನದೆಂದು ಕೊಂಡೆ..
ಸಾವಿರಾರು ನದಿಗಳು ಬಂದಪ್ಪಳಿಸುವ ತೀರವಿದು..
ಯಾವುದನ್ನು ಹಾಯಲಿ ನನ್ನದೆಂದು..
ಎಲ್ಲಿಂದಲೋ ಬಂದ ಅಲೆಯ ಹನಿಯು..
ಅ ಬದಿಯ ತೀರದಲಿ, ಅವಳಾಗಲೇ ..
ಅದ್ಯರಿಗೋ ಹಾಗಲೇ ಮೀಸಲೆಂದು, ಗುನುಗಿತು.
ಕಣ್ಣಳತೆ ದೂರದ ಕಣ್ಣಿರ ಹನಿಯೊಂದು,
ಮಾತ್ರವೇ ನನ್ನದೆಂದು ಜಿನುಗಿತು....
Comments
ಉ: ಕಣ್ಣಳತೆ ದೂರ
In reply to ಉ: ಕಣ್ಣಳತೆ ದೂರ by GOPALAKRISHNA …
ಉ: ಕಣ್ಣಳತೆ ದೂರ