ಕಣ್ಣಿನ ಮಾತು.........

ಕಣ್ಣಿನ ಮಾತು.........

ಬರಹ

ಕಣ್ಣು ಬಂದಾವೇನ್ರಿ? ಸರ..... ಎಂದ ನಮ್ಮಾಫೀಸಿನ Pಯೂನ್ ಕಲ್ಲಪ್ಪ. ಈಗ ಎಲ್ಲಿದೋ ಹೊಸದಾಗಿ ಕಣ್ಣು, ಮಣ್ಣು ನಾ ಹುಟ್ಟಿದಾಗಿನಿಂದ ಅದಾವೊ ಅವು ನೋಡಿಲ್ಲಿ ಒಂದಲ್ಲಾ ಎರಡು ಅದಾವಪ್ಪಾ ಎಂದೆ. ಅಯ್ಯ ಅದಲ್ಲ ಬಿಡ್ರಿ ಸ್ಸರಾ.... ನೀವು ಚಾಸ್ಟಿ ಮಾಡಲಾಕ ಹತ್ತೀರಿ, ನಾ ಕೇಳಿದ್ದು ಕಣ್ಣರಿ, ಕೆಂಪಾಗ್ಯಾವಲ್ಲಾ, ಕಣ್ಣಬ್ಯಾನಿ ಬಂದಂಗ ಕಾಣಿಸ್ತು ಅದಕ್ಕ ಕೇಳಿದೆರಿ. ಹೂ ನೊ ಯಪ್ಪಾ ಕಣ್ಣಬ್ಯಾನಿ ಸುರುವಾಗೇತಿ ಸರಿಯಾಗಿ ಕಣ್ಣ ಬಿಡಾಕ ಬರವಲ್ತು ಎಂದೆ. ಮತ್ತ ಕಪ್ಪ ಚಸಮಾ ಹಾಕ್ಕೋರಿ ಸರಾ ಇದು ಓಬ್ಬರಿಂದ ಮತ್ತೊಬ್ಬರಿಗೆ ಹರಡತೈತಂತ....... ನಮ್ಮೂರಾಗು ಹಿಂಗ ಆಗಿತ್ರಿ ಹ್ವಾದ ವರ್ಸ.... ಅಂತ ತನ್ನ ಎಲ್ಲಾ ಇಪ್ಪತ್ತೆಂಟು ಎಲಿ ಅಡಕಿ ತಿಂದು ಕೆಂಪಾಗಿ ಕಪ್ಪಾದ ಹಲ್ಲನ್ನು (ಉಳಿದ ನಾಲ್ಕು ಹಲ್ಲುಗಳನ್ನು ಹುಳು ತಿಂದುಬಿಟ್ಟಿರಬೇಕು! ಅದರ ಗೊಡವೆ ನಮಗೆ, ನಿಮಗೆ ಏಕೆ ಬೇಕು ಅಲ್ಲವೇ?) ತೋರಿಸುತ್ತಾ ನಿಂತ. ನನಗೆ ಇವನ ಪುರಾಣ ಕೇಳುವ ಮನಸ್ಸಾಗಲಿಲ್ಲ ಸರಿ ಕಲ್ಲಪ್ಪಾ ಈ ಫೈಲ್ ಸಾಹೇಬರ Cಏಂಭರಿ ತಗೊಂಡು ಹೋಗಿ ಇಡು ಸಾಹೇಬರು ಕೇಳಾಕಹತ್ತಿದ್ರು ಎಂದು ಸಾಗಹಾಕಿ ಕಣ್ಣಿಂದ ಸುರಿದ ನೀರನ್ನು ಒರೆಸಿಕೊಳ್ಳುತ್ತಾ ಕುಳಿತೆ. ಇನ್ನೂ ಹತ್ತು ಮಿನಿಟಾಗಿಲ್ಲ ಅಸ್ಟರಲ್ಲಿ ನನ್ನ ಸಹೋದ್ಯೋಗಿ ರಾಯಣ್ಣ ಅಲಿಯಾಸ್ ಮಾರುತಿರಾಯ ಬಂದು ಎದುರಿಗಿನ ಕುರ್ಚಿಯಲ್ಲಿ ಕುಳಿತ ಅಲ್ಲ ಕುಕ್ಕರಿಸಿದ ಅನ್ನುವದೆ ಸೂಕ್ತ ಅನಿಸುತ್ತದೆ. ಅಲ್ಲೋ ಕಣ್ಣ್ ಬಂದೈತಂತಲ್ಲೋ... ನರಸಿಮ್ಮಾ... ಅಲ್ಲಲ್ಲ ಕೆಂಡಗಣ್ಣ ನರಸಿಮ್ಮಾ... ಎಂದ. ನನಗೂ ತಡೆಯಲಾಗಲಿಲ್ಲ ಎನಪಾ ಹನ್ಮಂತ್ರಾಯಾ ಅರಾಮಾ ಎಂದು ನನ್ನ ಕಪ್ಪು ಕನ್ನಡಕ ತೆಗೆದು ಕೆಕ್ಕರಿಸಿದೆ. ನರಸಿಮ್ಮಾ ಕನ್ನಡಕ ತೆಗೀಬೇದ್ವೊ ನನಗು ಬಂದುಬಿಟ್ಟಾತು ಕಣ್ಣಬ್ಯಾನಿ, ದರಿದ್ರ ಎಂದ. ನನಗೆ ಗೊಂದಲವಾಯ್ತು ಇವನು ನನಗೆ ಬೈದನೊ ಅಥವಾ ಕಣ್ಣುಬೇನೆಗೆ ಬೈದನೊ ಅಂತ! ಅದನ್ನು ಕೇಳಲು ಮುಜುಗುರವಾಗಿ ಬೇರೊಂದು ರೀತಿಯಲ್ಲಿ ಅವನನ್ನಾ ಬೈದೆ. ನಾನು ಏನು ಏರ್ ಟೆಲ್, ವಡಾಪೋನ್, ಸಿಮ್ಮ ಅಲ್ಲಾ ನರಸಿಂಹ ಅಂದರೆ ವಿಶ್ಣುವಿನ ಅವತಾರಗಳಲ್ಲೊಂದಾದ ನರಸಿಂಹ ದೇವರ ಹೆಸರು ಎಂದೆ. ಪಾಪ ಹಿರಣ್ಯಕಶ್ಯಪನಂತೆ ಆಡಬಹುದು ಎಂದುಕೊಂಡಿದ್ದ ನನಗೆ ನಿರಾಸೆಯಾಗುವಂತೆ ಪ್ರಲ್ಹಾದನಂತೆ ಸ್ತುತಿಗೈಯ ತೊಡಗಿದ. ನೀ ಡಾಕ್ಟ್Rಈಗೆ ತೋರಿಸೆದೆನು? ಕಣ್ಣಿಗೆ ಡ್ರಾಪ್ಸ್ ಹಾಕ್ಕೊಂಡಿಯೇನು? ಲೀವ್ ತಗೋಬೇಕಿತ್ತು ಇತ್ಯಾದಿ.... ಇತ್ಯಾದಿ. ಆಯ್ತಪ್ಪಾ ಮಾರಾಯಾ ನಾಳೆ ಲೀವ್ ತೊಗೊತೇನೆ, ಡಾಕ್ಟ್ರೀಗೂ ತೋರಿಸಗೊತೇನೆ, ಡ್ರಾಪ್ಸೂ........... ಅನ್ನುತ್ತಿದ್ದಂತೆ ಓ. ಕೆ ಓ.ಕೆ ಅಂತ ಹೋಗೆಬಿಟ್ಟ. ಕಣ್ಣುರಿ, ತುರಿಕೆಗಳಿಂದಾಗಿ ಕೆಲಸ ಮಾಡುವದೆ ಕಸ್ಟವಾಗತೊಡಗಿತ್ತು ನನಗೆ. ಮೆ ಆಯ್ ಸಿಟ್ ಹಿಯರ್ ಡಿಯರ್ ಎಂಬ ಧ್ವನಿ ಕೇಳುತ್ತಲೆ ಅಂದುಕೊಂಡೆ ಇವಳು ನಮ್ಮ ಆಫೀಸಿನ ಕಂಪ್ಯೂಟರ್ ಆಪರೇಟರ್ ಆಶಾಬಾಯಿ ಹೌದು!!!! ಕಣ್ಣುರಿ ಇದ್ದರೆ ಕಿವಿ ಕೇಳದೆ? ಆರ್ ಯು ಜೋಕಿಂಗ್? ರಿಯಲಿ ಆರ್ ಯು ಸಫರಿಂಗ್ ಫ್ರಂ ಕಂಜಕ್ಟಿವಾಯ್ಟಿಸ್? ಎಂದು ಇಂಗ್ಲಂಡ್ ರಾಣಿಯ ಧಾಟಿಯಲ್ಲಿ ಕೇಳಿದಳು. ನಾನು ಸುಮ್ಮನೆ ಕುಳಿತಿದ್ದೆ ನನ್ನ ಮೌನ ಅವಳಿಗೆ ನಿರಾಸೆಯನ್ನುಂಟು ಮಾಡಿದಂತೇನು ಕಾಣಲಿಲ್ಲ ಬದಲಾಗಿ ಯೆಸ್, ಆಯ್ ಅಂಡರಸ್ಟುಡ್ ಯು ಆರ್ ಅಲ್ಸೋ ಸಫರಿಂಗ್ ಫ್ರಂ ಬ್ಯಾಡ್ ಥ್ರೋಟ್! ಆ ಕಲ್ಲಪ್ಪ ನನಗೆ ಹೇಳೆ ಇಲ್ಲಾ. ಬುಲ್ ಶಿಟ್...... ಬಾಯಿ ಆಶಾಬಾಯಿ ನನ್ನ ಗಂಟಲಿಗೆ ಏನು ಆಗಿಲ್ಲ, ಆಗೋದು ಬೇಡ ಮಾರಾಯತಿ ಓಹೋ ಇದು ಕಲ್ಲಪ್ಪನ ನ್ಯೂಸು. ಎಲ್ಲಾರಿಗೂ ಸುದ್ದಿಹೇಳ್ತಾನೆ ಅವರು ಹೌದೋ ಅಲ್ವೊ ಅಂತಾ ಬಂದು ನೋಡತಾರೆ ಮಾಡಬೇಕು ಸರಿಯಾಗಿ ಈ ಕಲ್ಲಪ್ಪನಿಗೆ ಎಂದು ಮನಸಲ್ಲೆ ಲೆಕ್ಕಹಾಕ ತೊಡಗಿದ್ದೆ. ಸಿಂಹಾ ಡಿಯರ್ ಟೇಕ್ ಮೆಡಿಸಿನ್ ಡೋಂಟ್ ನೆಗ್ಲೆಕ್ಟ ಹಾ... ಎನ್ನುತ್ತಾ ಮಾಯವಾದಳು ಮಾಯಾಂಗನೆ. ಅರೇ ಹೋದೆಯ ಫಿಶಾಚಿ ಎಂದ್ರೆ ಬಂದೆ ಗವಾಕ್ಶಿಲೀ ಅನ್ನುವಂತೆ ಮತ್ತೆ ಬಂದ್ಲು ಸಿಂಹಾ ಡಿಯರ್ ಟೇಕ್ ದಿಸ್ ಗ್ಲಾಸ್, ಇೞ್ ಯು ವೇರ್ ಇಟ್ ಯು ವಿಲ್ ಲುಕ್ ಲೈಕ್ ಶಾರೂಕ್ ಹಾ... ಎನ್ನುತ್ತಾ ಕಪ್ಪನೆ ಸ್ಪೋಟ್ಸ ಕನ್ನಡಕ ಕೊಟ್ಟು ಕಣ್ಣು ಮಿಟುಕಿಸಿ ಹೋದಳು. ಈಗ ನಾನು ಶಾರೂಕ್ ಆಗಿದ್ದೆ.......... ಅಂದ್ರೆ ನಾನು ಅವಳು ಕೊಟ್ಟ ಕನ್ನಡಕ-ಲೋಚನನಾಗಿದ್ದೆ !!!! ಎ ಕಾಲೇ.. ಕಾಲೇ... ಆಂಕೆ..... ಸಾಸಿವೆಯಸ್ಟು ಸುಕಕ್ಕೆ ಸಾಗರದಸ್ಟು ಧುಕಃ ಆಗಲೇ ಭಾಸ್ ಕರೆಯಬೇಕೆ? ನೋಡಿ ಮಿ. ನರಸಿಂಹ ನೀವು ಎರಡು ದಿವಸ ಲೀವ್ ತೊಗೋಳಿ ಯಾಕೆ ಹೇಳ್ತೀನಿ ಅಂದ್ರೆ. ಇದೂ ಮದ್ರಾಸ್ - ಐ, ಆಫೀಸಿನಲ್ಲಿ ಎಲ್ಲರಿಗೂ ಹರಡೋದು ಬೇಡ. ಇವತ್ತು ಗುರುವಾರ ನೀವು ಸೋಮವಾರ ಬಂದ್ರೆ ಸಾಕು ಆಫೀಸಿಗೆ. ನಾನು ಲೀವ್ ಸ್ಯಾಂಕ್ಶನ್ ಮಾಡಿದೇನೆ ನಿಮಗೆ ಒಂದು ಲೆಟರ್ ಕೊಟ್ಟು ಮನೆಗೆ ಹೋಗಿ. ಅಪ್ಪಣೆ ಮಹಾಪ್ರಭುಗಳೆ ಎಂದು ಬಾಯಿ ಬಿಟ್ಟು ಹೇಳಲಿಲ್ಲ ನಿಜ ಆದರೆ ಅವರಮಾತನ್ನು ಶಿರಸಾವಹಿಸಿ ಮನೆಗೆ ಬಂದು ಮಲಗಿದೆ. ಈಗಾಗಲೇ ನಾಲ್ಕು ದಶಕ ಕಳೆದಿರುವ ನನಗೆ ನಾಲ್ಕು ದಿನ ಕಳೆಯುವದು ಯಾವ ಮಹಾ? ಸೋಮವಾರ ಮತ್ತೆ ನನ್ನ ಕೆಲಸಕ್ಕೆ ಹಾಜರಾದೆ.... ನೋಡಲೆರಡು ಕಣ್ಣು ಸಾಲದು!!!!!! ಆಫೀಸಿನ ಮಂದಿಗೆಲ್ಲಾ, ಕಣ್ಣು, ಕಂಜಕ್ಟೀವಾಯ್ಟಿಸ್, ಮದ್ರಾಸ್- ಐ.