ಕಣ್ಣಿರು ಕಡ್ಡಾಯ

ಕಣ್ಣಿರು ಕಡ್ಡಾಯ

ಕವನ

 ತಾಯಿ ಗರ್ಭದಲ್ಲಿ ನವ ಮಾಸ ಕಳೆದು ಹೊಸ ಲೋಕಕ್ಕೆ ಕಾಲಿಟ್ಟಾಗ ಅಪ್ಪನ  ಕಣ್ಣಲ್ಲಿ ಕಣ್ಣಿರು ಕಡ್ಡಾಯ

ಮೊದಲ ಬಾರಿಗೆ ಅಪ್ಪ ಅಂದ್ದಿದನ್ನ ನಮ್ಮಪ್ಪ ಅಮ್ಮಂಗೆ ಹೇಳೋವಾಗ ಅವರಿಬ್ಬರ ಕಣ್ಣಲ್ಲಿ ಕಣ್ಣಿರು ಕಡ್ಡಾಯ
ಟೀಚರ್ ಹೇಳಿಕೊಟ್ಟ ಪದ್ಯ ಮನೇಲಿ ಅಮ್ಮಂಗೆ ತೊದಲು ನುಡಿಯಲ್ಲೇ ಹೇಳಿದಾಗ ಅಮ್ಮನ ಕಣ್ಣಲ್ಲಿ ಕಣ್ಣಿರು ಕಡ್ಡಾಯ
ಮೊದಲ ಗೆಳೆಯ ನನ್ನ ಜೊತೆ ಜಗಳ ಆಡಿ ಮಾತು ಬಿಟ್ಟಾಗ ಯಾರಿಲ್ಲದ ಜಾಗದಲ್ಲಿ ಬಿಕ್ಕಿ ಬಿಕ್ಕಿ ಅತ್ತಾಗ ಕಣ್ಣಿರು ಕಡ್ಡಾಯ

ಜೇಬಲ್ಲಿರೋ ಒಂದು  ರೂಪಾಯಿಗೆ ಬಾಂಬೆ ಮಿಠಾಯಿ  ಕೊಡದೆ ಹಂಗೆ ಸೈಕಲ್ ಏರಿ ಹೋದಾಗ ಕಣ್ಣಿರು ಕಡ್ಡಾಯ
ಪ್ರೀತಿಯ ಅಜ್ಜಿ  ದೇವರ ಹತ್ತಿರ ಹೋಗೋವಾಗ ದೇವರ ಜೊತೆನೆ ಜಗಳ ಆಡೋವಾಗ ಕಣ್ಣಿರು ಕಡ್ಡಾಯ
ಕಾಗದದ ದೋಣಿ ಸೋನೆ  ಮಳೆಯ ಹೊಡೆತಕ್ಕೆ ಸಿಕ್ಕಿ ಒದ್ದೆಯಾಗಿ ಹರಿದು ಹೋದಾಗ ಕಣ್ಣಿರು ಕಡ್ಡಾಯ
ಮಗ್ಗಿ ಲೆಕ್ಕ ತಪ್ಪಾದಾಗ ಎಲ್ಲರ ಮುಂದೆ ಟೀಚರ್ ಹೊಡೆದು ಗೆಳೆಯರೆಲ್ಲ ನಕ್ಕಾಗ ಕಣ್ಣಿರು ಕಡ್ಡಾಯ

ಕತ್ತಲ್ಲಲ್ಲಿ ಸಿಕ್ಕ ಬೆಕ್ಕಿನ ಮರಿಯ ಗಂಟೆಯ ಸದ್ದು ಒಮ್ಮೆಲೇ ಮಾಯವಾದಾಗ ಕಣ್ಣಿರು ಕಡ್ಡಾಯ
ವರುಷಗಳೆಲ್ಲ ಚೆನ್ನಾಗಿ ಆಡಿ,ಓದಿ ಬೆಳೆದ ಶಾಲೆಯನ್ನು ಬಿಳ್ಕೊಡುವಾಗ  ಕಣ್ಣಿರು ಕಡ್ಡಾಯ
ಅಕ್ಕರೆಯ ತಂಗಿ ತವರು ಮನೆ ತೊರೆದು ಇನಿಯನ ಜೊತೆ ಹೊರಟು ನಿಂತಾಗ ಕಣ್ಣಿರು ಕಡ್ಡಾಯ
ನಲುಮೆಯ ಗೆಳತಿ ರಾತ್ರಿಯೀಡಿ ಬರೆದ ಪ್ರೇಮ ಪತ್ರ ಹರಿದು ಹಾಕಿದಾಗ ಕಣ್ಣಿರು ಕಡ್ಡಾಯ

ಹಡೆದ ತಾಯಿ ಅವಸರದಲ್ಲೂ ಬಾಯಲ್ಲಿ ತುತ್ತೊಂದನ್ನು ಹಾಕೋವಾಗ ಕಣ್ಣಿರು ಕಡ್ಡಾಯ
ನನಗೆ ನೌಕರಿ ಸಿಕ್ಕ ಖುಷಿಯಲ್ಲಿ ಅಪ್ಪ ಊರೆಲ್ಲ ಸಂಭ್ರಮಿಸಿದನ್ನ ಕೇಳೋವಾಗ  ಕಣ್ಣಿರು ಕಡ್ಡಾಯ
ಜೀವನದ ವಿಷ ಘಳಿಗೆಯಲ್ಲೂ ಪ್ರತಿ ನಿಮಿಷ ಜೊತೆಗಿರೋ ಮಡದಿ ಸಿಕ್ಕಾಗ ಕಣ್ಣಿರು ಕಡ್ಡಾಯ
ಉಸಿರು ನಿಂತ ಮೇಲೆ ನಾಲ್ಕು ಜನ ನನ್ನ ಹೊತ್ತು ನಡೆವಾಗ ಚುಕ್ಕಿವನದಲ್ಲಿ  ಕಣ್ಣಿರು ಕಡ್ಡಾಯ..........
                                                                                                        
                                                                                                           ಚುಕ್ಕಿ.
                                                                                                (ಪ್ರವೀಣ್ .ಎಸ್.ಕುಲಕರ್ಣಿ)

 

Comments