ಕಣ್ಮಣಿ

ಕಣ್ಮಣಿ

ಕವನ

ಪುನೀತ ನಿನ್ನ ಹೆಸರೇ ಅಪ್ಯಾಯಮಾನ

ನೀನೋರ್ವ ದೇವನಿತ್ತ  ವರದಾನ

ಭರತ ಖಂಡದ ಮುದ್ದು  ರತ್ನ

ಎಲ್ಲರ ಮನಗೆದ್ದ ಸಂಪನ್ನ

 

ಬಡವರ ಬಂಧುವಾಗಿ ಸದಾ ಮೆರೆದೆ

ಪಡೆಯ ಕಟ್ಟದಿದ್ದರೂ ಅಭಿಮಾನ ಗಳಿಸಿದೆ

ಅಡಿಗಡಿಗೆ  ಸಾಧನೆಯ ಮೆಟ್ಟಿಲೇರಿದೆ

ತಡೆಗೋಡೆ ಇಲ್ಲದೆಯೆ ಸಾಗಿದೆ

 

ಕನ್ನಡದ ಕಂದ ಸಕಲರಿಗೆ ಸಹಕರಿಸಿದೆ

ವೃದ್ಧರನು ಹೆತ್ತವರಂತೆ ನೋಡಿದೆ

ಮಕ್ಕಳ ಕಲಿಕೆಯ ಪ್ರೋತ್ಸಾಹಿಸಿದೆ

ದುಡಿಮೆಯ ಸಮಾಜಕ್ಕಾಗಿ ಬಳಸಿದೆ

 

ನಿನಗೆ ನೀನೇ ಸಾಟಿ ಮಗನೆ

ಪಾರ್ವತಮ್ಮನ ಮಡಿಲ ಕಂದಮ್ಮನೆ

ಮುತ್ತುರಾಜರ ಆದರ್ಶಕೆ ಸಾಕ್ಷಿಯಾದವನೆ

ಕೋಟಿಯಲೊಬ್ಬ ಸಿನಿಲೋಕದ ಮುತ್ತು ಮಾಣಿಕ್ಯನೆ

 

ಅಕಾಲದಿ ಭಗವಂತನ ಪಾದ ಸೇರಿದೆ

ಸಾವಿನಲ್ಲೂ ಸಾರ್ಥಕತೆ ಮೆರೆದೆ

ಅಂಗ ಅಂಗವನೂ ಹೊನ್ನಾಗಿಸಿದೆ

ದೀನರ ಬಂಧು ಅಭಿಮಾನಿಗಳ ಕಣ್ಮಣಿಯಾದೆ

 

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್