ಕತೆ - ಕತೆಯೊಳಗೆ
ಕವನ
ಮನ ಮನದ ಒಳಗೆ
ಕನ ಕನಸು ಮೂಡಿ
ಮಿರ ಮಿರನೆ ಮಿಂಚಿ ಮಿನುಗೆ
ಗುಡಿ ಗುಡಿಯಲಿಂದು
ಗಣ ಗಣನೆ ಗಂಟೆ
ಹೊಡೆ ಹೊಡೆದು ಶಬ್ದ ಮೊಳಗೆ
ಮತ ಮತದ ಜೊತೆಗೆ
ಮನ ಮನವನಿಟ್ಟು
ಖುಷಿ ಖುಷಿಯಲೆಂದು ಸಾಗಿ
ಕತೆ ಕತೆಯ ಹಾಡು
ಸವಿ ಸವಿಯ ನಡೆಗೆ
ನನ ನನಸು ಬಂತು ಕೂಗಿ
ಮರ ಮರದ ಸೊಬಗು
ನೆರ ನೆರಳಿನೊಡನೆ
ತರ ತರಹ ಜನರ ಕಡೆಗೆ
ಭಯ ಭಯವ ಬಿಟ್ಟು
ನಡೆ ನಡೆಯ ಕಲಿತು
ಕತೆ ಕತೆಯ ಹುಟ್ಟು ಬುವಿಗೆ
***
ಬದುಕಿನ ನಾಟಕದ
ಅಂಕದ ಪರದೆ
ಹುಟ್ಟಿದ ಯಾವುದೇ
ಕ್ಷಣದಲ್ಲೂ
ಜಾರಬಹುದು!
ಆತ್ಮ
ಕಳಚಿದ
ದೇಹ
ಮಸಣ
ಸೇರ
ಬಹುದು !!
-ಹಾ ಮ ಸತೀಶ
ಚಿತ್ರ್