ಕತ್ತಲಿನ ಕ್ಷಣಗಳಲಿ . . .
ಕವನ
ರವಿ ಜಾರಿ ಹೋಗಿರುವ
ಪಡುವಣದ ಅಂಚಿನಲಿ. . .
ಭೂ ರಮಣಿ ಮುದುಡಿ
ಮಲಗಿಹಳು ಬೇಸರದಲಿ. . .
ಹಾಲಿನ ಬಣ್ಣದ ಬೆಳಕ ಚೆಲ್ಲುತ
ಬಂದಿಹನು ಚಂದಿರ ಬಾನಿನಲ್ಲಿ. . .
ನಗುವ ಸೂಸುತ ಸ್ವಾಗತಿಸಿದೆ ;
ಅಂದದ ನೈದಿಲೆ ಕೊಳದಲಿ. . .
ಚುಕ್ಕಿ ತಾರೆಗಳು. . .ನಲಿದಿವೆ
ಬಲು ಸಡಗರದಲಿ. . .
ಚಂದಿರನ ತುಂಟಾಟವ
ನೆನೆಯುತಲೇ. . .ಮನದಲಿ
ಅರಳಿ ಪರಿಮಳ ಬೀರುತಿದೆ
ಜಾಜಿ ಮಲ್ಲಿಗೆ ಚಪ್ಪರದಲಿ
ದೂರದಲಿರುವ ನಲ್ಲನ ನೆನೆದು
ನಲ್ಲೆ ಮರುಗುತಿಹಳು ವಿರಹದಲಿ
ಕತ್ತಲಾವರಿಸಿದ ಕ್ಷಣದಲಿ. . .
ಅದೆಷ್ಟು ಬದಲಾವಣೆ ಭುವಿಯಲಿ. . .
ಮೌನವಾಗಿರುವ ಈ ವೇಳೆಯಲಿ
ನೂರಾರು ಭಾವಗಳು ಮನದಲಿ. . .
Comments
ಉ: ಕತ್ತಲಿನ ಕ್ಷಣಗಳಲಿ . . .