ಕತ್ತಲೆಯ ನಿರೀಕ್ಷೆಯಲ್ಲಿ...
ಕವನ
ಈ ಲೋಕದಲ್ಲಿ
ಈ ಜಗಧರ್ದ ಜನರು
ಕತ್ತಲೆಯ ನೀರಿಕ್ಷೆಯಲ್ಲಿ ಇರುವರು
ಸೂರ್ಯ ಮುಳುಗುವುದನ್ನೇ ಕಾಯುವರು
ಕತ್ತಲಾದೊಡನೇ ಬಾರುಗಳ ಕಾರುಬಾರು
ನಡೆದಿದೆ ಎಲ್ಲೆಲ್ಲೂ ಬಲು ಜೋರು
ವಿಸ್ಕಿ ವ್ಯೆನು ಬಿಯರು ಹಾಗೂ ಕುಡುಕರು
ಕತ್ತಲೆ ಸಾಮ್ರಾಜ್ಯದ ಸಾಮಂತರು
ಕವಿದಿದೆ ಕತ್ತಲು ಎಲ್ಲೆಲ್ಲೂ
ಕೆಂಪು ದೀಪದ ಕೆಳಗೆ ಇರುವರು ಆದರು ಬೆತ್ತಲು
ಇವರ ಆರ್ತ ನಾದದ ಕೂಗನು ಕೇಳುವರಾರು
ಧರೆಗಿಳಿದು ಬರಬೇಕೇನೋ ಆ ದೇವರು
ಇರುಳಲ್ಲಿ ಮನೆಯಿಂದ ಹೊರ ಬರುವಂತಿಲ್ಲ
ಮಕ್ಕಳು ಮಹಿಳೆಯರು ಒಬ್ಬಂಟಿಯಾಗಿ
ಬೀದಿ ಕಾಮಣ್ಣರು ಕಳ್ಳರು ಕಾಕರು
ರಾಮ ರಾಜ್ಯದ ಕನಸು ಕನಸೇ
-ಎಸ್. ನಾಗರತ್ನ, ಚಿತ್ರದುರ್ಗ
ಚಿತ್ರ್
