ಕಥಾಕುಂಜ

ಕಥಾಕುಂಜ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕ: ರವಿಕುಮಾರ್ ಅಜ್ಜೀಪುರ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರುನವ
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೨

ರವಿಕುಮಾರ ಅಜ್ಜೀಪುರ ಇವರ ಸಂಪಾದಕತ್ವದಲ್ಲಿ ನವಕರ್ನಾಟಕ ಪ್ರಕಾಶನ ಇವರು ಹೊರತಂದಿರುವ ಸಣ್ಣ ಕಥೆಗಳ ಸಂಗ್ರಹವೇ 'ಕಥಾಕುಂಜ'. ಈ ಪುಸ್ತಕದ ಬೆನ್ನುಡಿಯಲ್ಲಿ "ಹೊಸತು ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ವಿಷಯವಾರಾಗಿ ವಿಂಗಡಿಸಿ 'ಹೊಸತು ವಾಚಿಕೆ' ರೂಪದಲ್ಲಿ ಓದುಗರಿಗೆ ನೀಡುತ್ತಿದ್ದೇವೆ. ಯಾವುದೇ ವಿಷಯಕ್ಕೆ ಸಂಬಂಧಿಸಿದ ಲೇಖನಗಳು ಒಂದೆಡೆ ದೊರೆತರೆ ಬೌದ್ಧಿಕ ಮತ್ತು ಕ್ರಿಯಾತ್ಮಕ ಚರ್ಚೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂಬುದು ಈ ವಾಚಿಕೆಗಳ ಪ್ರಕಟಣೆಯ ಹಿಂದಿರುವ ಉದ್ದೇಶ. 

ಈ 'ಕಥಾಕುಂಜ' ೨೫ ಸಣ್ಣಕಥೆಗಳ ಸಂಕಲನ. ಹೊಸರು ಪತ್ರಿಕೆಯ ಆರಂಭದ ಐದು ವರ್ಷಗಳ ಅರವತ್ತು ಸಂಚಿಕೆಗಳಿಂದ ಈ ಕಥೆಗಳನ್ನು ಆಯ್ದು ಕೊಳ್ಳಲಾಗಿದೆ.

'ಕಥಾಕುಂಜ' ಸಂಪುಟದ ಸಂಪಾದಕರು ಶ್ರೀ ರವಿಕುಮಾರ ಅಜ್ಜೀಪುರ. ನವಕರ್ನಾಟಕ ಸಂಸ್ಥೆಯಿಂದಲೇ ಪತ್ರಿಕೋದ್ಯಮಕ್ಕೆ ಪ್ರಥಮ ಹೆಜ್ಜೆ ಇಟ್ಟವರು. ಹೊಸತು ಪತ್ರಿಕೆಯನ್ನು ಆರಂಭಿಕ ದಿನಗಳಲ್ಲಿ ಪುಷ್ಟೀಕರಿಸಿದವರು. ರವಿಕುಮಾರ್ ಅಜೀಪುರ ಕವಿ, ಕಲಾವಿದ, ಕಥೆಗಾರ ಹಾಗೂ ಪತ್ರಕರ್ತರಾಗಿದ್ದಾರೆ. 'ಓ ಮನಸೇ' ಪತ್ರಿಕೆಗೆ ಸಂಪಾದಕರಾಗಿದ್ದವರು. ಹಲವು ಪ್ರತಿಷ್ಟಿತ ಸಂಸ್ಥೆಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಏಷ್ಯಾನೆಟ್ ಸುವರ್ಣ ಸ್ಯೂಸ್ ಚಾನೆಲ್ ನಲ್ಲಿ ಅಸೋಸಿಯೇಟ್ ಎಡಿಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರವಿಕುಮಾರ್ ಅಜ್ಜೀಪುರ ಅವರ 'ನೆನಪಿರಲಿ, ಪ್ರೀತಿ ಕಾಮವಲ್ಲ, ಪ್ರೇಮಸೂತ್ರ' ಪುಸ್ತಕಗಳು ಪ್ರಕಟವಾಗಿವೆ." ಎಂದು ಪ್ರಕಟಿಸಿದ್ದಾರೆ.