ಕಥೆ - 'ಅಡ್ಡದಾರಿ ಬಿಟ್ಟ, ಸಾಧನೆ ದಾರಿ ಹಿಡಿದ'

ಕಥೆ - 'ಅಡ್ಡದಾರಿ ಬಿಟ್ಟ, ಸಾಧನೆ ದಾರಿ ಹಿಡಿದ'

ಒಂದು ಊರಲ್ಲಿ ಒಬ್ಬ ತಾಯಿ ಮತ್ತು ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಮುದ್ದಿನ ತಂಗಿ ಇರುತ್ತಾಳೆ, ಆ ತಾಯಿಯ ಗಂಡ ತುಂಬಾ ಕುಡಿತ ಜೂಜು ಮುಂತಾದ ಅನೇಕ ಚಟಾದಿಗಳಿಂದ ಕೂಡಿದ ವ್ಯಕ್ತಿ, ಆತ ಸುಮಾರು ವರ್ಷಗಳವರೆಗೆ ಇದ್ದು ಸ್ವಲ್ಪ ದಿನಗಳ ನಂತರ ಸತ್ತು ಹೋಗುತ್ತಾನೆ.

ಇತ್ತ ಗಂಡ ತಿರಿಹೋದ ನಂತರ ಹೆಂಡತಿಗೆ ಮನೆತನದ ಭಾರ, ಮಕ್ಕಳ ಸಾಕಿ ಸಲಹುವ ಜವಾಬ್ದಾರಿ ಕೂಡ ಬೀಳುತ್ತದೆ. ಆ ತಾಯಿಯ ಜೊತೆ ಹಿರಿಯ ಮಗನು ಕೂಡ ತಾಯಿಗೆ ಹೆಗಲು ಕೊಡೂದಕ್ಕೆ ಪ್ರಯತ್ನ ಮಾಡಿ, ಸ್ವಲ್ಪ ದಿನಗಳ ನಂತರ ತಾಯಿಯ ಜವಾಬ್ದಾರಿ ಕಡಿಮೆ ಮಾಡುತ್ತಾನೆ, ತಾಯಿ ತನ್ನ ಎರಡನೇ ಮಗ ಮತ್ತು ಕಿರಿ ಮಗಳ ಆರೈಕೆ ಮಾಡುತ್ತಾಳೆ, ಹಿರಿಯ ಮಗನು ಜವಾಬ್ದಾರಿ ತೆಗೆದುಕೊಂಡು ಏನೂ ಕಡಿಮೆ ಆಗದಂತೆ ಮನೆ ಮತ್ತು  ಮನೆಯ ಸದಸ್ಯರನ್ನು ನೋಡಿಕೊಳ್ಳುತ್ತಾನೆ.

ಹೀಗೆ ಕೆಲವು ದಿನಗಳ ನಂತರ ತಾಯಿಗೆ ಒಂದು ಸಂಶಯ ಕಾಡುತ್ತದೆ, ಆ ತಾಯಿಗೆ ನೋವು ಕಾಡುತ್ತದೆ, ನನ್ನ ಮಗ ಇಷ್ಟು ಸಣ್ಣ ವಯಸ್ಸಿನಲ್ಲೇ ಇಷ್ಟು ಕಷ್ಟ ಪಟ್ಟು ನಮ್ಮನ್ನೆಲ್ಲ ನೋಡಿಕೊಳ್ಳುತ್ತಾನೆ, ಅವನ ಯೋಗ ಕ್ಷೇಮ ಸಮಾಚಾರ ಕೇಳಬೇಕು ಎಂದು ತಾಯಿ ಹಂಬಲಿಸುತ್ತಾಳೆ, ಒಂದು ದಿನ ಮಗ ತಡರಾತ್ರಿ ಮನೆಗೆ ಮರಳುತ್ತಾನೆ, ಆಗ ತಾಯಿ ಮಗನಿಗೆ ಅಲ್ಲ ಮಗ ನೀನು ಹೇಗಿದ್ದೀಯಾ, ನಿನ್ನ ಆರೋಗ್ಯ ಹೇಗಿದೆ, ನೀನು ಕೆಲಸ ಮಾಡುವುದಾದರೂ ಯಾವುದು? ಎಂದು ಕೇಳುವಷ್ಟರಲ್ಲಿ ಮಗ ಬಡಬಡ ಊಟ ಮಾಡಿದವನೇ ಎದ್ದು ಹೊರಟು ಹೋಗುತ್ತಾನೆ.

ಇತ್ತ ತಾಯಿ ನನ್ನ ಮಗ ಯಾವುದಕ್ಕೂ ಉತ್ತರ ಹೇಳಲಿಲ್ಲ ಅಂತ ಕೊರಗುತ್ತಾಳೆ, ಇರಲಿ ಬಿಡು ಮತ್ತೊಂದು ದಿವಸ ಕೇಳಿದರಾಯಿತು ಎಂದು ಅಂದುಕೊಂಡು ಸುಮ್ಮನಾಗುತ್ತಾಳೆ, ಒಂದು ದಿವಸ ಹೊಯಿತು, ಎರಡು ದಿವಸ ಹೊಯಿತು, ಒಂದು ವಾರ ಹೊಯಿತು, ಮಗ ತಾಯಿಯ ಕೈಗೆ ಸಿಗುವುದೇ ಇಲ್ಲ, ಹೀಗಾಗಿ ಒಂದು ದಿವಸ ತನ್ನ ಮಗ ಇಲ್ಲದ ಸಮಯದಲ್ಲಿ ಆತನ ಗೆಳೆಯ ಮನೆಗೆ ಬರುತ್ತಾನೆ, ಆಗ ಆತನನ್ನು ಕೇಳುತ್ತಾಳೆ, "ನೀನು ಮತ್ತು ನಿನ್ನ ಗೆಳೆಯ ಎನು ಕೆಲಸ ಮಾಡುತ್ತಿರಿ, ಯಾವ ಕಂಪನಿಯಲ್ಲಿ ಉದ್ಯೋಗ ಮಾಡುತಿರುವಿರಿ ?"ಎಂದು ಕೇಳುತ್ತಾಳೆ.

ಆಗ ಮಗನ ಗೆಳೆಯನ ಉತ್ತರ ಬಲು ಖಾರವಾಗಿತ್ತು ಮತ್ತು ಆಘಾತದಿಂದ ಕೂಡಿತ್ತು ,ನಾವ ಅವ್ವ..., ಕೆಲಸ... ಕೆಲಸನ್ನಾ, ಎಲ್ಲಿ ಬರಬೇಕು ನಮಗೆ ಕೆಲಸ, ದರೋಡೆ, ಕಳ್ಳತನ ಮಾಡುವುದಕ್ಕೆ ಹೋಗುತ್ತೇವೆ, ಅದಕ್ಕೆ ಇಷ್ಟೆಲ್ಲಾ ಮಾಡಿದ್ದರಿಂದ ನಿಮ್ಮನ್ನೆಲ್ಲ ಸುಖವಾಗಿ ನೋಡಿಕೊಳ್ಳಲು ಸಾಧ್ಯವಾಯಿತು ಎಂದು ಹೇಳುತ್ತಾನೆ, ಆಗ ತಾಯಿಯ ಹೃದಯ ಬಲು ನೋವು ಪಟ್ಟಿತು, ಸಹಿಸಲಾರದ ವೇದನೆ, ಸಂಕಟ ತಾಯಿಯ ಹೃದಯಕ್ಕೆ ಸಿಡಿಲು ಬಡಿದಂತಾಯಿತು.

ಆ ದಿನ ಆ ತಾಯಿ ಮಗ ಬರುವುದನ್ನೇ ಕಾಯ್ದು ಕುಳಿತಿದ್ದು, ಮಗ ತಡರಾತ್ರಿ ಮನೆಗೆ ಬರುತ್ತಾನೆ ಆಗ ಮಗ, ಏಕೆ ಹೊತ್ತು ಆಯಿತು ಕೆಲಸ ತುಂಬಾ ಇತ್ತಾ? ಇನ್ನೂ ಏಕೆ ನಿದ್ರೆ ಮಾಡಿಲ್ಲ? ಎಂದು ಕೇಳುತ್ತಾನೆ ,ಆಗ ತಾಯಿ, ಮಗ ನೀನು ಕೆಲಸ ಎಲ್ಲಿ ಮಾಡುವೆ ಹೇಳು... ಹೇಳು... ಎಂದು ಪೀಡಿಸಿ ಕೇಳಿದಾಗ ಮಗನ ಉತ್ತರ ವಿಳಂಬ ಆಗುತ್ತದೆ ,ಆಗ ತಾಯಿ, ಮಗ ನೀನು ಇಷ್ಟು ದಿವಸ ನನ್ನ ಮರೆಮಾಚಿ ಇಟ್ಟಿದ್ದ ಒಂದು ಸತ್ಯ ಇವತ್ತು ಹೊರಗೆ ಬಿತ್ತು, ಆ ಸತ್ಯ ಏನೆಂದರೆ ನೀನು ಕಳ್ಳತನ ಮಾಡುತ್ತಿರುವೆ ಅಲ್ಲವೆ ಎಂದು ಮಗನನ್ನು ತಾಯಿ ಕೇಳುತ್ತಾಳೆ, ಆಗ ಮಗನು ತಡವರಿಸಿ ಇಲ್ಲ... ಅವ್ವ... ಇಲ್ಲ... ಅವ್ವ.. ಹೇಳುತ್ತಾನೆ.

ಆಗ ತಾಯಿ ನೋಡು ಮಗ, ನಾವು ಉಪವಾಸ ಸತ್ತರೂ ಚಿಂತೆಯಿಲ್ಲ. ಆದರೆ ನೀನು ಕಳ್ಳತನದಿಂದ ತಂದ ದುಡ್ಡಿನಿಂದ ಒಂದು ತೊಟ್ಟು ನೀರನ್ನೂ ಕೂಡ ಕುಡಿಯುವುದಿಲ್ಲ ಎಂದು ತಾಯಿ ಮಗನಿಗೆ ಹೇಳುತ್ತಾಳೆ, ನೋಡು ಮಗ, ನಾವು ಉಪವಾಸ ಇದ್ದರೂ ಜೀವನದಲ್ಲಿ ಇಂಥ ಅಪಾಯ ಹಾಗೂ ಮಾನ, ಗೌರವ, ಹೋಗುವ ಕೆಲಸ ಮಾಡಬಾರದು, ಒಂದು ವೇಳೆ ಮಾಡಿದರೆ ಸಾಯುತ್ತವೆ ಹೊರತು ಪಡಿಸಿದರೆ ನಾವು ಬದುಕುವುದಿಲ್ಲ ಎಂದು ತಾಯಿ ಕಣ್ಣೀರು ಸುರಿಸಿ ಅಳಲು ಪ್ರಾರಂಭಿಸಿದಳು.

ಮಗನಿಗೆ ತಾಯಿ ನೋಡು ಮಗ, "ಇನ್ನೂ ಮೇಲೆ ಕಳ್ಳತನ ಮಾಡಬೇಡ, ಕಷ್ಟ ಪಟ್ಟು ದುಡಿಯುವುದು ಕಲಿ" ಎಂದು ಹೇಳುತ್ತಾಳೆ, ಆಗ ಮಗ "ನಮಗೆ ಯಾರು ಕೆಲಸ ಕೊಡುತ್ತಾರೆ ಅವ್ವ? ಅದಕ್ಕೆ ಈ ಕೆಲಸಕ್ಕೆ ಕೈ ಹಾಕಿದೆವು" ಎನ್ನುತ್ತಾನೆ.  "ಬೇಡ ಮಗ, ಅಂತ‌ಹ ಕೆಲಸ ಮಾಡಬೇಡ, ಅದು ಪಾಪದ ಕೆಲಸ, ಮನೆ ಮುರಿಯುವಂತ ಕೆಲಸ, ಹಾಗಾಗಿ ದುಡಿದು ತಿಂದರೆ ಅದರ ರುಚಿಯೇ ಬೇರೆ ಎಂದು ತಾಯಿ ಮಗನಿಗೆ ತಿಳಿ ಹೇಳುತ್ತಾಳೆ.

ಮಗ ತಾಯಿಯ ಬಗ್ಗೆ ತುಂಬಾ ಗೌರವ ಇಟ್ಟಿದ್ದ, ತಾಯಿಯ ಆಸೆಯಂತೆ ದುಡಿಮೆ ಆರಂಭಿಸಲು ನಿರ್ಧಾರ ಮಾಡುತ್ತಾನೆ, "ಅವ್ವ ನನ್ನ ಕ್ಷಮಿಸಿ ಬಿಡು ಇನ್ನು ಮೇಲೆ ನಾನು ನೀನು ಹೇಳಿದ ಹಾಗೆ ಬದುಕಿ ತೋರಿಸುತ್ತೇನೆ" ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ, ತಾಯಿಯ ಪಾದಕ್ಕೆ ನಮಸ್ಕಾರ ಮಾಡುತ್ತಾನೆ.

ಮುಂಜಾನೆಯ ಮಂಜು ನಸುಕಿನ ಜಾವ ಇನ್ನೇನು ಕೆಲವೇ ನಿಮಿಷಗಳಲ್ಲಿ ಸೂರ್ಯ ಉದಯ, ಮಗನು ಸೂರ್ಯ ದೇವನಿಗೆ ನಮಸ್ಕಾರ ಮಾಡಿ, "ದೇವರೇ ಇವತ್ತು ನಾನು ಕೈ ಹಾಕುವ ಕೆಲಸದಲ್ಲಿ ಸಹಾಯ ಮಾಡು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ, ಕೆಲಸ ಪ್ರಾರಂಭಿಸುತ್ತಾನೆ, ಕೈಯಲ್ಲಿ ಒಂದು ಚೀಲ ಹಿಡಿದು "ಹಳೆ ಪಾತ್ರೆ, ಹಳೆ ಶೀಸೆ, ಹಳೆ ಪೇಪರ್ ಇದಾವು ಏನ್ರಿ?" ಎನ್ನುತ್ತಾ ಸಾಗುತ್ತಾನೆ, ಸ್ವಲ್ಪವೂ ನಾಚಿಕೊಳ್ಳದೆ, ಮುಜುಗರ ಪಡದೆ ಮುನ್ನುಗ್ಗಿ ನಡೆಯುತ್ತಾನೆ.

ಒಂದು ದಿನ ಹೋಯಿತು, ಒಂದು ವಾರ ಹೋಯಿತು, ಒಂದು ವರ್ಷ ಆಯಿತು, ಆ ಹುಡುಗ ತನ್ನ ಕೆಲಸವನ್ನು ಅತಿ ಆಸಕ್ತಿಯಿಂದ, ಶ್ರದ್ಧೆಯಿಂದ,ಅತಿ ಚಾಕು ಚಕ್ಕತೆಯಿಂದ ಕಾರ್ಯ ನಿರ್ವಹಿಸುತ್ತಿರುತ್ತಾನೆ,ಆತನ ಆಸಕ್ತಿ, ಶ್ರದ್ಧೆ, ಆತನನ್ನು ತುಂಬಾ ಎತ್ತರಕ್ಕೆ ಬೆಳೆದು ನಿಲ್ಲಿಸಿತು, ಚೀಲ ಹಿಡಿದು "ಹಳೆ ಪಾತ್ರೆ ಹಳೆ ಶೀಸೆ, ಹಳೆ ಪೇಪರ್, ಅನ್ನುತ್ತಾ ಸಾಗಿದ್ದ ಹುಡುಗನ ಕೈಯಲ್ಲಿ ಹತ್ತಾರು ಆಳು ಕಾಳು, ಕಾರು ಪಾರು ಬಂದು ಬಹಳ ಸಮೃದ್ಧಿಯಿಂದ ಬೆಳೆದು ನಿಂತನು.

ಮೊದಲು ಕಳ್ಳತನ ಮಾಡುವ ಸಂದರ್ಭದಲ್ಲಿ ಬೈಯುತ್ತಾ ಇದ್ದ ಜನ, ಇವನು ಬೆಳೆದು ನಿಂತ ಮೇಲೆ ಬಾಯಿ ಮೇಲೆ ಕೈಯಿಟ್ಟು ಕೊಳ್ಳುವ ಹಾಗೆ ಬದುಕಿ ತೋರಿಸಿದನು, ತಾಯಿ ಆಶೆ, ಇತನ ಶ್ರದ್ಧೆ ಗೆ, ದೇವರ ಆಶೀರ್ವಾದ ಸದಾ ಇತನು, ನಗುತಾ ಬಾಳುವಂತೆ ಮಾಡಿತು, ಆತ್ಮಿಯರೇ ಮನಸು ಮಾಡಿದರೆ ಜಗತ್ತನ್ನೇ ಗೆಲ್ಲಬಹುದು ಎಂದು ತೋರಿಸಿದನು.

ಕಾಯಕದಲ್ಲಿ ತೊಡಗಿಕೊಂಡು, ಕಾಲ, ಸಮಯ, ಬೇರೆ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಮುಂದೆ ಗುರಿ, ಹಿಂದೆ ಗುರು, ಎದೆಯ ಹೊರಗೆ ಧೈರ್ಯ, ನಿಚ್ಚಲವಾದ ಮನಸು, ಕಾಯಕದ ಮಹತ್ವ, ಇಟ್ಟು ಮುಂದೆ ಸಾಗಿ ನಡೆದರೆ, ಸೋಲು ತಾನಾಗಿಯೇ ಹಿಂದೆ ಸರಿದು, ಮುಂದೆ ಮೊದಲು ಅವಮಾನ, ಅನುಮಾನ, ಕಡೆಗೆ ಸನ್ಮಾನ ಸಿಗುತ್ತದೆ, ಸಹನೆ ತೋರಿ ಸಾಧನೆ ಮಾಡಿ, ಎಂದು ಕೇಳಿಕೊಳ್ಳುತ್ತಾ ಚಿಕ್ಕವನಾದ ನನ್ನ ಕಥೆ ಮುಗಿಸುತ್ತೇನೆ.

-ಎಚ್.ವ್ಹಿ.ಈಟಿ, ಶಿಕ್ಷಕರು, ಸಾ.ನರೇಗಲ್ಲ

ಚಿತ್ರ ಕೃಪೆ: ಇಂಟರ್ನೆಟ್ ತಾಣ