ಕದಡುತ್ತಿರುವ ಮಲೆನಾಡಿನ ನೆಮ್ಮದಿ..!

ಕದಡುತ್ತಿರುವ ಮಲೆನಾಡಿನ ನೆಮ್ಮದಿ..!

Comments

ಬರಹ

ಪ್ರಶಾಂತವಾಗಿದ್ದ ಮಲೆನಾಡನಲ್ಲಿ ಬಂದೂಕಿನ ನಳಿಕೆಯಡಿ ಸಮಾನತೆಯನ್ನು ಸಾಧಿಸಲು ಹೊರಟಿರುವ ನಕ್ಸಲರ ಪ್ರಯತ್ನ ಎಷ್ಟರ ಮಟ್ಟಿಗೆ ಪ್ರಸ್ತುತ ಹಾಗು ಎಷ್ಟರ ಮಟ್ಟಿಗೆ ಸಾಕಾರಗೊಳ್ಳುತ್ತಿದೆ ಎನ್ನುವುದು ಒಂದು ದೊಡ್ಡ ಪ್ರಶ್ನೆಯೆ ಸರಿ. ನಿಜ ಹೇಳಬೇಕೆಂದರೆ ಈ ಚಳುವಳಿಯಿಂದ ಎಷ್ಟುಜನ ಬಡವರಿಗೆ ಉಪಕಾರಿಯಾಗಿದೆಯೋ ಗೊತ್ತಿಲ್ಲ, ಆದರೆ ನಕ್ಸಲರ ಹಾಗು ಪೋಲೀಸರ ನಡುವೆ ಸಿಕ್ಕಿ ಹಲವು ಕುಟುಂಬಗಳು ನಾಶಗೊಂಡಿದ್ದಂತೂ ಸತ್ಯ! ಈ ಕಾಡಿನ ಆಜುಬಾಜಿನ ಹಳ್ಳಿಗಳಲ್ಲಿ, ನಕ್ಸಲರಿಗೆ ಆಶ್ರಯ ನೀಡುವವನೆಂದು ಪೋಲಿಸರ ದೌರ್ಜನ್ಯದಿಂದ  ಹಾಗು ಪೋಲಿಸರ  ಇನ್‍ಫಾರ್ಮರ್ಎಂದು ನಕ್ಸಲರ ಉಪಟಳದಿಂದ ಹಲವಾರು ಸಂಸಾರಗಳು ನಾಶವಾಗಿ ಹೋಗಿವೆ. ಇದೆಲ್ಲಾ ಯಾಕೆ ಬರೆದೆನೆಂದರೆ, ನಿನ್ನೆ TV9 ಚಾನೆಲ್‍ನಲ್ಲಿ ತೋರಿಸಲಾದ ಭೂ ಮಾಫಿಯಾದ ಆಮಿಷ(ದೌರ್ಜನ್ಯ?) ಬಲಿಯಾಗಿ ಜಮೀನನ್ನು ಮೂರುಕಾಸಿಗೆ ಮಾರಿಕೊಂಡು, ಈಗ ತಮ್ಮದೆ ಜಮೀನಿನಲ್ಲಿ ಮನೆಕಟ್ಟಿಕೊಂಡವರ ಮನೆಯಲ್ಲಿ ಮನೆಗೆಲಸದವರಾಗಿ ದುಡಿಯುತ್ತಾ ಜೀವನ ಸವೆಸುತ್ತಾ ಇರುವ ಬೆಂಗಳೂರಿನ ಸುತ್ತಮುತ್ತಲಿನ ಹಳ್ಳಿಯ ಬಡರೈತರ ಸ್ಥಿತಿಯನ್ನು ನೋಡಿ ಹಾಗು ಇದಕ್ಕೆ ಪೂರಕವಾದ ನಕ್ಸಲರನ್ನು ಬೆಂಗಳೂರಿಗೆ ಆಹ್ವಾನಿಸಿದ ವಿಕಾಸ್ ಹೆಗಡೆಯವರ ಈ ಲೇಖನವನ್ನು ಓದಿ ಒಂದಿಷ್ಟು ಚಿಂತನೆಗೆ ಹಚ್ಚಿತು..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet