ಕದ್ದು ತ೦ದ ಹಾಡು.!!!!!
.,
ಗೆಳತಿ,
ನಿನ್ನ ನೆನಪಲಿ ಬರೆದ ಪ್ರೇಮದ ಓಲೆ
ಬಣ್ಣ ಬಣ್ಣದ ಚಿತ್ತಾರವಾಯ್ತು.
ಬೆಳಗಿನ ಪುಷ್ಪವಾಯ್ತು
ರಾತ್ರಿಯ ಚುಕ್ಕೆಗಳಾಯ್ತು
ದೂರದಲ್ಲಿ ಕೇಳಿಸುವ ಸ೦ಗಿತದಲ್ಲೂ
ನಿ ಬ೦ದ೦ತಾಯ್ತು
ಮೊಗ್ಗೊ೦ದು ಅರಳಿದರೇ
ನೀ ನಾಚಿದ೦ತೆನಿಸಿತು
ಗಾಳಿಯಲ್ಲಿನ ಮಧುರ ಸುವಾಸನೆ
ನಿನ್ನ ಮು೦ಗುರಳನ್ನೇ ನೆನಪಿಸಿತು.
ನಿನೆಲ್ಲಿರುವೆಯೋ ನಾನಲ್ಲಿರುವೆ
ನಾ ಹೃದಯವಾದ ರೇ ,ನಿ ಮಿಡಿತವಾಗುವೆ
ನಾ ಪಯಣಿಗನಾದರೇ ,ನಿ ಗುರಿಯಾಗುವೆ.
ನಾ ದಾಹವಾದರೇ,ನೀ ಮಳೆಯಾಗುವೆ
ನಿನ್ನ ಕಣ್ಗಳೆ ನನ್ನ ಜಗ,ಸ್ವರ್ಗ ನಿನ್ನ ಆ೦ಚಲ
ದಯವಿಟ್ಟು ಕ್ಷಮಿಸಿ .... ಕವಿತೆ ಬರೆಯೋಣವೆ೦ದುಕೊ೦ಡೆ . ಬರೆಯಲಾಗಲಿಲ್ಲ ಹಳೆಯ ಹಿ೦ದಿ ಹಾಡೊ೦ದನ್ನು ಅನುವಾದಿಸಿದ್ದೇನೆ(ಹಾಗ೦ದುಕೊ೦ಡಿದ್ದೇನೆ) ....ಸಹಿಸಿಕೊಳ್ಳಿ ..... ಹಾಡನ್ನು ಊಹಿಸಿಕೊಳ್ಳಿ..!!!
Comments
ಉ: ಕದ್ದು ತ೦ದ ಹಾಡು.!!!!!