ಕದ ತಟ್ಟುವ ಮುನ್ನ.....

ಕದ ತಟ್ಟುವ ಮುನ್ನ.....

ಕವನ

 

ಎಲ್ಲರೂ ಎದುರಾಗುತ್ತಿದ್ದಾರೆ.

ಯಾರೂ ಪರಸ್ಪರ ಗುರ್ತಿಸುತ್ತಿಲ್ಲ.

ಸುಮ್ಮನೆ ಸಾಗಿರುವ ಈ ಯಾನದಲ್ಲಿ

ಫಲವತ್ತತೆಯನ್ನು ಮರೆತುಬಿಡುತ್ತಿರುವ

ಮಣ್ಣಿನಿಂದ ಧೂಳು ಏಳುತ್ತಿದೆ.

ಆಕಾಶ ಮಬ್ಬಾಗುತ್ತಿದೆ.

 

ಹಣ್ಣನ್ನು ಮರೆತು ಬಿಡುತ್ತಿರುವ ಕೊಂಬೆಗಳಿಂದ

ಕಪಟಗಳು ಇಳೆ ಬಿದ್ದಿವೆ.

ಅವು ಕತ್ತಲಿಗೆ ಕಾದಿವೆ.

 

ಈ ಧೂಳು ಮತ್ತು ಕತ್ತಲಲ್ಲಿ

ಧಾರಾಳವಾಗಿ ವಾಸ ಮಾಡಲು ಬಂದಿರುವ

ಮತಾಂಧತೆ, ದ್ವೇಷ, ನಿರಾಸೆ, ಹತಾಷೆ,

ಏನೂ ಮಾಡಲಾಗದ ಅಸಹಾಯಕತೆ,

ಮೋಸ, ಭಯ, ಬದುಕಿನ ಅಭದ್ರತೆಗಳು

ಕವಿತೆಯನ್ನು ಕೂಡಿ ಹಾಕಿವೆ.

----------------------------------------

ಶೇಷಾದ್ರಿ ಸಿ.ವಿ.