ಕನಕದಾಸರ ಕುರಿತು ಎರಡು ಕವನಗಳು

ಕನಕದಾಸರ ಕುರಿತು ಎರಡು ಕವನಗಳು

ಕವನ

ಮೇರು ಕನಕ

ವ್ಯಾಸರು ಮೆಚ್ಚಿದ

ದಾಸರ ಪಂಕ್ತಿಯ

ಮೋಸವನರಿಯದ ಮುಗ್ಧರಿಗೆ

ತೋಷದಿ ಪರೀಕ್ಷೆ

ದಾಸರುವಿಟ್ಟರು

ಬೇಸರ ತೋರಿದ ಶಿಷ್ಯರಿಗೆ||

 

ಬಾಳೆಯ ಫಲವನು

ಕಾಳಗೆ ಕಾಣದೆ

ಕಾಳಜಿಯಿಂದಲಿ ಸವಿರೆಲ್ಲ 

ಕಾಳನುವಿಲ್ಲದ್

ಸ್ಥಳವದುವಿಲ್ಲವು

ಹೇಳಿದ ಸುಂದರ ಜಗಮಲ್ಲ||

 

ಬಚ್ಚಮ ತನಯನು

ಕೆಚ್ಚೆದೆ ಶೂರನು

ಹೆಚ್ಚಿತು ಕೀರ್ತಿಯು ಮನೆತನದು

ರೊಚ್ಚಿಗೆ ಬರುವನು

ಚುಚ್ಚುತ ವೈರಿಯ

ಕೊಚ್ಚುತ ಚಣದಲಿ ಮಧಿಸುವನು||

 

ತಿಮ್ಮಪ್ಪ ವರನಿವ

ತಿಮ್ಮಪ್ಪ ನಾಯಕ

ಬಿಮ್ಮಿನ ಬೀರಪ್ಪ ಸುಪುತ್ರನು

ಸುಮ್ಮನೆ ಕೆಣಕುವ

ಹಮ್ಮಿನ ಹಗೆಗಿವ

ಗುಮ್ಮನ ತರದಲಿ ಕಾಡುವನು ||

 

ರಾಮನ ಧಾನ್ಯದ

ನೇಮವ ಪೊಗಳಿದ

ಧಮಯಂತಿ ನಳರ ಕೃತಿರಚಿಸಿ

ರಾಮನ ಭಕ್ತನು

ತಾಮಸ ಗುಣದವ

ನಾಮದಿ ಕನಕವ ನೀ ಗಳಿಸಿ||

 

-ಶ್ರೀ ಈರಪ್ಪ ಬಿಜಲಿ

 

***

ಕನಕದಾಸರು

ದಾಸಕುಲ ಮೇರುಕವಿ

ಕಾಶವದು ಸುತ್ತೆಲ್ಲ

ಬೀಸುತಿಹ ತಂಗಾಳಿ ಕನಕದಂತೆ

ಕೋಶದಲಿ ಕೀರ್ತಿಯದು

ಸಾಸಿರದ ನಾಮದೊಳು

ಹಾಸವನು ಮೂಡಿಸುತ ಸಾಗುತಿರಲು||

 

ಬಚ್ಚಮ್ಮ ಬೀರಪ್ಪ

ಗಚ್ಚು ನೆಚ್ಚಿನ ತನಯ

ಬೆಚ್ಚನೆಯ ನುಡಿಯಲ್ಲೆ ಜೀಕುತಿಹನು

ಪಚ್ಚೆ ಪೈರ ತೆನೆಯದು

ಹಚ್ಚ ಹಸಿರಿನ ತೇರು

ನೆಚ್ಚುತಲಿ ನೆಲದಲ್ಲಿ ಬಾಳಿದ್ದನು||

 

ಶತಮಾನ ಕಳೆದರೂ

ಶತಕವನು ಬಾರಿಸುತ

ಜತನದಲಿ ಬಿಂಬಿಸಿವೆ ಕೀರ್ತನೆಗಳು

ಮಥನದೊಳು ಬಿರುಸಾಗಿ

ಕಥೆಯಾಗಿ ಹೊರಬಂದು

ಕವಿಯೊಳಗೆ ಬಿತ್ತುತಿದೆ ನವಚಿಂತೆಯ||

 

ಕನಕನಿವ ದಾಸಕುಲ

ಧನಿಯಂತೆ ಸಾಹಿತ್ಯ

ಹನಿಯಾಗಿ ಜಿನುಗುತಿಹ ಕಾರಂಜಿಯು

ಸನಿಹದಲೆ ಸುಳಿದಾಡಿ

ಖನಿಯಂತೆ ಮೆರೆದಿಹನು

ತನುಮನದ ಕವಿವರ್ಯ ದಾಸನಿವನು||

 

ವ್ಯಾಸರಾಯರ ಶಿಷ್ಯ

ಭಾಷೆಯಲಿ ನಿಸ್ಸೀಮ

ತಾಸೆಯನು ಬಾರಿಸುತ ಹೇಳುತಿಹನು

ಮೋಸವದು ಸುಳಿವಿಲ್ಲ

ವೇಷವನು ಹಾಕಿಲ್ಲ

ತೋಷದಲಿ ಕೀರ್ತನೆಯ ಬರೆಯುತಿಹನು||

 

ಜಾತಿಯನು ಖಂಡಿಸುತ

ಭೀತಿಯನು ತೊಲಗಿಸುತ

ಭಾತಿಯನು ಸೃಷ್ಟಿಸಲು ಹೋರಾಡಿದ

ನಾತನ ಸ್ಮರಿಸುತಲಿ

ಕಾತರತೆಯೊಂದಿಗೆಯೆ

ಚಾತುರತೆ ಬಿಂಬಿಸುವ ದಾಸನಾದ||

 

ಚಾಗವನು ಮಾಡಿಹನು

ಭಾಗದಲಿ ಕೃಷ್ಣನಿಗೆ

ವೇಗದಲಿ ನೆನಯುತ್ತ ಭಕ್ತನಾಗಿ

ಸಾಗುತಿಹ ಹಾದಿಯಲಿ

ತಾಗುಡಿಯ ನೆಲೆಯಲ್ಲಿ

ಕಾಗಿನೆಲೆಯಾದಿಕೇಶವನಾದನು||

 

ಕುರುಬನಿವ ಮೇರುಕವಿ

ಹಸಿರಲ್ಲಿ ಹೊಳೆದಿಹನು

ಹಿರಿತನದ ಯೋಗ್ಯತೆಯ ಬಿಂಬಿಸುತಲಿ

ಅರಿಯುತ್ತ ನಡೆದಿಹರು

ಸುರಿಸುತಿಹ ಕಾವ್ಯದೊಳೆ

ಹರಡಿದರು ಧೀರತೆಯ ಸಂದೇಶವ||

 

ಉನ್ನತ ವ್ಯಕ್ತಿತ್ವ

ಭಿನ್ನತೆಯ ಬೀರುತಲಿ

ಕನ್ನಡದಿ ಕಾವ್ಯಗಳ ಹೊರತಂದರು

ಹೊನ್ನುಡಿಯ ಬಿತ್ತುತ್ತಲಿ

ನನ್ನುಡಿಗೆ ಬೆಲೆಯಿತ್ತು

ಮುನ್ನುಡಿಯ ದೀವಿಗೆಯ ಹಚ್ಚಿಸಿದರು||

 

ಮನುಜಮತ ಸಾರಿದರು

ಕನಕಗಿರಿ ಸಾಹಿತ್ಯ

ಕನಿಸುತ್ತ ಭಕ್ತಿಮಾರ್ಗವನು ನಿತ್ಯ

ಪುನರುಕ್ತ ಸಂಗಮವು

ಮನವರಿಕೆ ಮಾಡುತಲಿ

ಮನಸಿಜನು ಸಾರಿದನು ಭಕ್ತಿಮಾರ್ಗ||

 

-ಅಭಿಜ್ಞಾ ಪಿ ಎಮ್ ಗೌಡ

 

ಚಿತ್ರ್