ಕನಲಿದ ಪುಟ್ಟ ಹೃದಯ...ಕರಗಿತು ಬಂಗಾರದ ಮನಸ್ಸು..!
ಇವತ್ತು ನನಗೆ ತುಂಬಾ ಖುಷಿ. ಬದುಕಿನ ಅಷ್ಟೂ ದಿನಗಳಿಗಿಂತಲೂ ಇಂದು ಹೆಚ್ಚಿನ ಸಂತೋಷ. ಯಾರದೋ ಮಗು ಅದು. ಅದರ ಆಸೆ ತೀರಿಸಿದ ಕ್ಷಣ ಶಾಶ್ವತವಾಗಿ ನನ್ನಲ್ಲಿ ಹುಮ್ಮಸ್ಸು ಮೂಡಿಸಿದೆ. ಸಾರ್ಥಕ ಭಾವ ತಂದುಕೊಟ್ಟಿದೆ. ಎಂದೂ ಮರೆಯದ ನೆನಪು ಉಳಿಸಿದೆ. ಮುಂದೆ ಇದೆ.
ಅದು 2008. ಆ ಮಗುಗೆ ನಾಲ್ಕುವರೆ ವರ್ಷ. ತಲೆಗೂದಲು ಉದಿರಿ ಹೋಗುತ್ತಿವೆ. ಬಿಳಿ ರಕ್ತಕಣಗಳು ಇಲ್ಲವೇ ಇಲ್ಲ. 10 ಸಾವಿರದಷ್ಟಿವೆ ಮಾತ್ರ. ಬೇಕಾಗಿರೋ ಪ್ಲೇಟ್ ಲೆಟ್ಸ್ ಬೇಡಬೇಕು. ಯಾರನ್ನಾದರು. ಅದು ಆ ಮಗುವಿನ ತಂದೆಯ ಸ್ಥಿತಿ. ಮಗುವೆಗೆ ಇದ್ಯಾವುದು ಗೊತ್ತಿಲ್ಲ. ಮನಸ್ಸಿನಲ್ಲಿ ಇರೋದು ಬಂಗಾರದ ನಟನ ನೋಡೋ ಆಸೆ. ಮುಂಗಾರು ಮಳೆಯ ಚಿತ್ರದ ಅನಿಸುತ್ತಿದೆ ಯಾಕೋ ಇಂದು ಹಾಡು ತುಂಬಾ ಇಷ್ಟ. ಸಾವಿನಂಚಿನಲ್ಲಿದ್ದೇನೆಂಬ ಪರಿವೂ ಇಲ್ಲ. ಗೋಲ್ಡನ್ ಸ್ಟಾರ್ ಗಣೇಶ್ ನನ್ನ ನೋಡೊ ಅಗಾಧ ಹಂಬಲ. ಇದು ಸಾಧ್ಯವೇ. ವೈಟ್ ಫೀಲ್ಡ್ ನ ಅದ್ಯಾವುದೋ ಮನೆಯಲ್ಲಿ ಇರೋ ಪುಟ್ಟ ಮಗು ಇದು. ಗೋಲ್ಡನ್ ಸ್ಟಾರ್ ಸಿಗ್ತಾರೆ. ಸಿಕ್ಕರೂ ವೈದೇಹಿ ಆಸ್ಪತ್ರೆಗೆ ಬರ್ತಾರಾ..? ಇದೆಲ್ಲ ಕನಸಿನ ಮಾತು ಅಂದು ಕೊಳ್ಳುವ ಹೊತ್ತಿಗೆ, ಸ್ವತ: ಗಣೇಶ್ ಬಂದೇ ಬಿಟ್ಟರು.
ಮಗುವಿನ ಆಸೆಯಂತೆ ಮೂರು ಗಂಟೆ ಆಸ್ಪತ್ರೆಯಲ್ಲಿಯೇ ಕಳೆದರು. ಮಗುವಿನ ಆರೋಗ್ಯ ವಿಚಾರಿಸಿದರು. ಕೈ ಹಿಡಿದು ಶೇಕ್ ಹ್ಯಾಂಡ್ ಕೊಟ್ರು. ಗಣೇಶ್ ಅವರ ಈ ಒಂದೇ ಒಂದು ಭೇಟಿ. ಈ ಒಂದೇ ಒಂದು ಸ್ಪರ್ಶ. ಮಗುವಿನ ಆರೋಗ್ಯ ಸುಧಾರಣೆಗೆ ಹೆಲ್ಪ ಆಯಿತು.ಆರ್ಥಿಕವಾಗಿ ನೆರವು ಬಂತು. ತಂದೆ ಅಶ್ವಿನ್ ಕುಮಾರ್ ಎಲ್ಲರಿಗೂ ಧನ್ಯವಾದಗಳನ್ನ ಹೇಳಿದರು. ಮಗನ ಆರೋಗ್ಯ ಸುಧಾರಣೆಗೆ ಪ್ರಾರ್ಥಿಸಿದ ಎಲ್ಲರಿಗೂ ವಂದನೆ ಅರ್ಪಿಸಿದರು. ಅಲ್ಲಿಗೆ ಮೊದಲಾರ್ಧ ಮುಗಿತು.
ದ್ವಿತಿಯಾರ್ಧದಲ್ಲಿ ಏನ್ ಆಯಿತು. ಇದುವೇ ಈ ಸತ್ಯ ಕತೆಯ ತಿರುವು. ಆ ಮಗು ಬೆಳೆದಿದ್ದಾನೆ. ಎಲ್ಲ ಮಗುವಿನ ಥರ ಚೆನ್ನಾಗಿ ಓಡಾಡಿಕೊಂಡಿದ್ದಾನೆ. 10 ವರ್ಷವೂ ಈಗ ತುಂಬಿದೆ. 5 ವರ್ಷದ ಹಿಂದೆ ನೋಡಿದ್ದ ಅದೇ ಗೋಲ್ಡನ್ ಸ್ಟಾರ್ ಗಣೇಶ್ ನನ್ನ ನೋಡೊ ಆಸೆ ಮತ್ತೆ ಚಿಗುರೊಡೆದಿದೆ. ಆದರೆ, ಈ ಸಲ ಹುಡುಗನ್ನ ನೋಡಲು ಗಣೇಶ್ ಬರಲಿಲ್ಲ. ಗಣೇಶ್ ಇದ್ದಲ್ಲಿಗೇ ಆ ಹುಡುಗ ಹೋಗಿದ್ದ. ಅದು ಗಣೇಶ್ ಶೂಟಿಂಗ್ ಮಾಡ್ತಿದ್ದ ಸ್ಪಾಟ್ ಗೆ . ಕಂಠೀರವ ಸ್ಟುಡಿಯೋದಲ್ಲಿ ಗಣೇಶ್ ನೈಟ್ ಶೂಟಿಂಗ್ ಗೆ ಬರೋರಿದ್ದರು. ಅವರಿಗಾಗಿ ಸಂಜೆ 6.30 ರವರೆಗೂ ಆ ಹುಡುಗ ಕಾದಿದ್ದ. ತಂದೆ ಅಶ್ವಿನ್ ಕುಮಾರ್ ತಾಯಿ ಲತಾ ಅಶ್ವಿನ್ ಕುಮಾರ್ ಅವರ ಜತೆಗೆ ಈ ಪುಟ್ಟ ಪೋರ್, ಕಾತರದಿಂದ ಕಾದಿದ್ದ...
ಬ್ಲಾಕ್ ಕಾರ್ ನಲ್ಲಿ ಗಣೇಶ್ ಕಳೆಗಿಳಿದರು. ಅವರನ್ನ ನೋಡಿದ ಈ ಮಹಾ ಪುಟ್ಟ ಅಭಿಮಾನಿ ಮೊಗದಲಿ ಸಂತಸ. ಗಣೇಶ್ ಗೂ ಅದೇ ಖುಷಿ. 5 ವರ್ಷದ ಹಿಂದೆ ನೋಡಿದ ಹುಡುಗ. ಹೆಸರು ಶಶಾಂಕ್. ಹಾಗಂತ ಆ ಹುಡುಗ ತನ್ನ ಹೆಸರನ್ನ ಹೇಳಿಕೊಳ್ಳಲಿಲ್ಲ. ಸ್ವತ: ಗಣೇಶ್ ಕೂಗಿದರು. `ಏನೋ ಹೀರೋ ಥರ' ಆಗಿದ್ದಿಯಾ ಎಂದರು. ಅದರಿಂದ ಶಶಾಂಕ್ ಮನಸ್ಸು ಇನ್ನಷ್ಟು ಪ್ರಪುಲ್ಲವಾಯಿತು. ನೋಡ..ನೋಡುತ್ತಲೇ ಗಣೇಶನನ್ನ ತಬ್ಬಿಕೊಂಡ ಶಶಾಂಕ್...
ಅಜ್ಜಿ ಮನೆಗೆ ಹೋಗಲು ರೆಡಿಯಾಗಿದ್ದ ಶಶಾಂಕ್ ಅವತ್ತೇ ರಾತ್ರಿ 8 ಗಂಟೆಯ ಬಸ್ಸಿಗೆ ಉಡುಪಿಗೆ ಹೊರಡೋನಿದ್ದನು. ಅದಕ್ಕೂ ಮೊದಲು ಒಮ್ಮೆ ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನ ನೋಡಬೇಕೆಂಬ ಕನಸಿತ್ತು. ಅದಕ್ಕೆ ಸ್ಪಂಧಿಸಿದ ಗಣೇಶ್, ಕಾಲ್ ಮಾಡಿದ್ದೇ ತಡ. ಶೂಟಿಂಗ್ ಸ್ಪಾಟ್ ಗೆ ಕರೆದು ತನ್ನಿ ಆ ಹುಡುಗನ್ನ ಅಂದಿದ್ದರು. ಹುಡುಗ ಬಂದಾಗ ಅಷ್ಟೇ ಪ್ರೀತಿಯಿಂದ ಸ್ವಾಗತಿಸಿದರು. ಇದು ಗೋಲ್ಡನ್ ಸ್ಟಾರ್ ಮನಸ್ಸು. ಆದರೆ, ಆ ಹುಡುಗನಿಗೆ ಆಗಿದ್ದಾದರೂ ಏನೂ..? ನಿಜ, ಈ ಪ್ರಶ್ನೆಗೆ ಉತ್ತರಿಸಲೇಬೇಕು. ಶಶಾಂಕ್ ಬ್ಲೆಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ. ಈಗ ಆರೋಗ್ಯ ಸುಧಾರಿಸಿದೆ. ಮೂರು ತಿಂಗಳಿಗೊಮ್ಮೆ ಬ್ಲೆಡ್ ಚೆಕಪ್ ಮಾಡಿಸುತ್ತಿದ್ದಾರೆ ಪೋಷಕರು. ಡಾಕ್ಟರ್ ಆಗೋ ಕನಸ್ಸಿರೋ ಶಶಾಂಕ್ ಗೆ ಒಳ್ಳೆಯದಾಗಲಿ..ಇದು ಸಿನಿಮಾ ಕಥೆ ಅಲ್ಲ. ಗೋಲ್ಡ್ ಸ್ಟಾರ್ ಗಣೇಶ್ ಜೀವನದಲ್ಲಿ ನಡೆದ ಸತ್ಯ ಘಟನೆ...
-ರೇವನ್ ಪಿ.ಜೇವೂರ್
Comments
ಉ: ಕನಲಿದ ಪುಟ್ಟ ಹೃದಯ...ಕರಗಿತು ಬಂಗಾರದ ಮನಸ್ಸು..!
ಇದು ಹೃದಯದ ಸ್ಪಂದನ! ಗಣೇಶರಿಗೆ ಅಭಿನಂದನೆಗಳು, ಪರಿಚಯಿಸಿದ ನಿಮಗೂ.