ಕನವರಿಕೆ

ಕನವರಿಕೆ

ಕವನ

ಕಾಡುವ ಕನವರಿಕೆಗೆ ಮದ್ದು

ಉಳಿಸು ನೆನಪುಗಳ ಕದ್ದು

ತಂಗಾಳಿಯಲೂ ತೀಡಿದ ಭಾವ

ಕೊನೆಯಾಗಿಸು ಕಾಣದ ನೋವ

 

ಭಾವಗಳ ಪ್ರಪಾತದ ಆಳದಿ

ಬಂಧಿ ಈ ಮನವು ಖೈದಿ

ಮುನಿಸುಗಳ ಕೊನೆಗೊಳಿಸಿ ಬಿಡಿಸು

ಮರಳಿ ನಲಿವ ಕದವ ತೆರೆಸು

 

ಹೃದಯ ಲಂಗರುಹಾಕಿದೆ

ಉಸಿರುಗಳ ಎಣಿಸುತಿದೆ

ಕಳೆಯುತಿದೆ ಈಗ ಸಮಯವು 

ಕೂಡಬೇಕು ನೀನೇ  ನಿಮಿಷವು

-ನಿರಂಜನ ಕೇಶವ ನಾಯಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್