ಕನಸುಗಳು

ಕನಸುಗಳು

ಕವನ

ಕನಸುಗಳ ಕಾಣುತ್ತ

ತೆರೆದ ಕಣ್ಣುಗಳಿಂದ

ಛಾವಣಿಯ ದಿಟ್ಟಿಸುತ್ತ

ಮಲಗಿದವನಿಗೆ

ಬೆಳಕು ಹರಿದದ್ದು

ಗೊತ್ತಾಗಲಿಲ್ಲ,

ಕೆಂಗಣ್ಣಿನಿಂದ

ಕೆಲಸಕ್ಕೆ ಹೋದವನಿಗೆ

ನನಸಿಲ್ಲನುಭವಿಸುವನೇಕ

ಅನುಭವಗಳೇ

ಮುದ ನೀಡಿದವು,

ಮಾಯಾ ಲೋಕದ

ಈಡೇರದ ಕನಸುಗಳಿಗಿಂತ.