ಕನಸು ಎರಡಾಯಿತು

ಕನಸು ಎರಡಾಯಿತು

ಕವನ

ಏನು ವಿಶೇಷವಿಲ್ಲದ ಒಂದು ದಿನ
ಯಾವ ಹೊಸತನವು ಮೂಡದ ಕ್ಷಣ
ಎದುರಾದೆ ನನ್ನ ಮನದ ಸನಿಹದಲ್ಲಿ
ಕನಸು ಎರಡಾಯಿತು

ಜೇಬಲ್ಲಿ ಮೂರುವರೆ ನೆನಪುಗಳ ಬಚಿಟ್ಟು
ತಂಗಾಳಿಯಲ್ಲಿ ತೇಲಿ ಬಂದ ನಾಲ್ಕು ಮಾತುಗಳ ಮರೆತು
ಕಣ್ಣಲ್ಲಿ ನೂರು ಭಾವ ಸಾಕೆಯೆಂದು ಬಂಧಿಸಿ
ಕನಸು ಎರಡಾಯಿತು

ವಾರಾಂತ್ಯಕ್ಕೆ ಪಡೆದ ಹಾಜರಿಗಳೆಲ್ಲ ನೆನಪಾಗಿ ಹಿಂದೆ
ಭೇಟಿಯಾಗದ ದಿನಗಳ ಕನಸಂತೆ ದೂಡಿ ಮುಂದೆ
ಬಿಡುವು ಮಾಡಿ ನೋಡು ನಿನ್ನ ಹೃದಯದಲ್ಲಿ
ಕನಸು ಎರಡಾಯಿತು

ಚಂದ್ರನಿಲ್ಲದ ನೆನಪಿಗೆ ಚಂದ್ರ ಬಿಂಬದ ಬೆಳಕು
ಸೂರ್ಯ ಮೂಡುವ ಹೊತ್ತಿಗೆ ತಾರೆಗಳ ಮೆಲುಕು
ಪ್ರೀತಿ ಪ್ರೇಮ ಕಾಗದದಲ್ಲಿ ಕರಗಿ
ಕನಸು ಎರಡಾಯಿತು