ಕನಸು ಬೀಳದಾಗಿದೆ

ಕನಸು ಬೀಳದಾಗಿದೆ

ಕವನ

ಕನಸು ಬೀಳದಾಗಿದೆ

ನನಸು ಮೂಡದಾಗಿದೆ

ಮನದ ಬಯಕೆ ಹೀಗೆಯೆ ಮುಂದೆ ಮುಂದೆ ಸಾಗಿದೆ

ತನುವು ಇಂದು ಬಾಗಿದೆ

ವನದ ಸವಿಯು ಆರಿದೆ 

ವಿನಯ ಬಾಳು ಹೀಗೆಯೆ ಮುಂದೆ ಮುಂದೆ ಸಾಗಿದೆ

 

ಸೋಲು ಕಹಿಯ ತಂದಿದೆ

ಜಾಲದೊಳಗೆ ತಳ್ಳಿದೆ

ಸಾಲ ಪ್ರೀತಿ ಹೀಗೆಯೆ ಮುಂದೆ ಮುಂದೆ ಸಾಗಿದೆ

ಲಾಲಿಯಿರದೆ ಬಾಡಿದೆ

ಬೇಲಿಯಿರದೆ ಹಾಗಿದೆ

ಮೂಲ ಪ್ರೇಮ ಹೀಗೆಯೆ ಮುಂದೆ ಮುಂದೆ ಸಾಗಿದೆ

 

ಭಾವ ತಾಳ ಸೋತಿದೆ

ಕಾವ ಜೊತೆಗೆ ಸೇರದೆ

ಬೇವು ಬೆಲ್ಲ ಹೀಗೆಯೆ ಮುಂದೆ ಮುಂದೆ ಸಾಗಿದೆ

ತೇವದೊಳಗೆ ಮಲಗಿದೆ

ಜೀವ ಛಲವು ಮೂಡದೆ

ಸಾವ ಜೊತೆಗೆ ಹೀಗೆಯೆ ಮುಂದೆ ಮುಂದೆ ಸಾಗಿದೆ 

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್