ಕನಸು ಮತ್ತು ವಾಸ್ತವ
ಕನಸು ಮತ್ತು ವಾಸ್ತವ
ಅತ ಅವಳನ್ನು ದಿವಸ ಕಾಲೇಜಿನಲ್ಲಿ ದಿವಸ ನೋಡುತ್ತಿದ್ದ. ಅಕೆಯೂ ನೋಡುತ್ತಿದ್ದಳು. ದಿನಗಳು ಕಳೆದವು. ಕೆಲವಮ್ಮೆ ಆತ ಆಕೆ ಎದುರುಗಡೆ ಬಂದಾಗ ಕಣ್ಣಿನಲ್ಲೆ ಮಾತನಡಿಸುತ್ತಿದ್ದ. ಆಕೆ ಮುಗುಳ್ನಗುವಿನಲ್ಲಿ ಉತ್ತರಿಸುತ್ತಿದ್ದಳು. ದಿವಸಗಳು ಹೀಗೆ ಸಾಗಿದವು. ಅವನು ಮದುವೆಯಾದರೆ ಅವಳನ್ನೆ ಎಂದುಕೊಂಡ. ಆಕೆಯು ಈತ ಶ್ರೀಮಂತನಾದರೆ ತನ್ನ ಮದುವೆಯು ಯಾಕಾಗಬಾರದು ಎಂದುಕೊಂಡಳು. ಈತನು ತನ್ನ ಪ್ರೀತಿಯನ್ನು ಆಕೆಗೆ ಹೇಳಬೇಕೆಂದುಕೊಂಡ. ಆದರೆ ಮಾತುಗಳು ಗಂಟಲಲ್ಲಿ ಉಳಿದವು. ಆಕೆಯು ನೀನು ಸಕತ್ತು ಶ್ರೀಮಂತನಾದರೆ ಒಪ್ಪಿಗೆ ಎಂದುಕೊಂಡಳು. ಆದರೆ ಆಕೆಗೆ ತುಟಿ ಬಿಚ್ಚಲಾಗಲಿಲ್ಲ. ಹೀಗೆಯೆ ಕಾಲೇಜಿನ ಜೀವನವು ಮುಗಿದೇ ಹೋಯಿತು. ಆಕೆ ಕೋರ್ಸನ್ನು ಮುಗಿಸಿ ಊರಿಗೆ ಹೊರಟು ಹೋದಳು. ಆತನು ಅಕೆಯ ನೆನಪಲ್ಲಿ ಊರಿಗೆ ಹೋದ. ಆಕೆಗೆ ಕೆಲದಿನಗಳ ನಂತರ ಬೇರೆ ಹುಡುಗನ ಜತೆ ಮದುವೆ ಮಾಡಿದರು. ಆತನು ಕೆಲ ವರ್ಷಗಳನಂತರ ಬೇರೆ ಹುಡುಗಿಯ ಜತೆ ಮದುವೆ ಆದ.